ನವದೆಹಲಿ: ಮಕ್ಕಳಲ್ಲಿ ದೇಶಭಕ್ತಿ ಮೂಡಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ‘ದೇಶಭಕ್ತಿ ಧ್ಯಾನ್’ ಪಠ್ಯ ಪುಸ್ತಕ ಬಿಡುಗಡೆ ಮಾಡಿದೆ. ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ‘ದೇಶಭಕ್ತಿ ಧ್ಯಾನ್’ ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ.
ದೇಶಭಕ್ತಿ ಧ್ಯಾನ್ ಎಂಬ ಪಠ್ಯ ಪುಸ್ತಕವನ್ನ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಿಡುಗಡೆ ಮಾಡಿದ್ದಾರೆ. ಪ್ರತಿದಿನ ತರಗತಿ ಶುರುವಾಗುವ ಮುನ್ನ ಬೆಳಿಗ್ಗೆ 5 ನಿಮಿಷಗಳ ಕಾಲ ದೇಶಭಕ್ತಿ ಬೆಳೆಸುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ನಡೆಸಲಾಗುವುದು. 6- 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಈ ಬೋಧನೆ ನಡೆಯಲಿದ್ದರೆ, 9- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ದಿನ ದೇಶಪ್ರೇಮ ಕುರಿತ ತರಗತಿ ನಡೆಸಲಾಗುವುದು.
6ರಿಂದ ದ್ವಿತೀಯ ಪಿಯುಸಿ ತನಕ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು. ಪ್ರತಿದಿನ 5 ನಿಮಿಷಗಳ ದೇಶಭಕ್ತಿ ಕುರಿತ ವಿಚಾರ ಪ್ರಸ್ತುತಿ ಹೊರತಾಗಿ 40 ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು ಎಂದು ಕ್ರೇಜಿ ವಾಲ್ ಅವರು ತಿಳಿಸಿದ್ದಾರೆ.

























Discussion about this post