ಕಾಬೂಲ್: ತಾಲಿಬಾನ್ ಮೂಲಗಳು ಅಫ್ಘಾನ್ ದೇಶದ ನೂತನ ಸರ್ಕಾರಕ್ಕೆ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅವರು ನಾಯಕರು ಎಂದು ಘೋಷಿಸಿದೆ. ತಾಲಿಬಾನ್ ಮುಖ್ಯ ವಕ್ತಾರ ಜಬಿಯುಲ್ಲಾ ಮುಜಹಿದ್ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದರ್ ಸರ್ಕಾರದ ಉಪನಾಯಕ ಎಂದು ಹೇಳಿದ್ದಾರೆ.
ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕುಬ್ ರಕ್ಷಣಾ ಸಚಿವನಾಗಿಯೂ, ಹಖ್ಬಾನಿ ಗುಂಪಿನ ನಾಯಕ ಸಿರಾಜುದ್ದೀನ್ ಹಖ್ಬಾನಿ ಆಂತರಿಕ ಸಚಿವರಾಗಿದ್ದಾರೆ. ಈ ಆಯ್ಕೆಗಳ ಬೆನ್ನಲ್ಲೇ ಸಚಿವ ಸಂಪುಟ ಇನ್ನೂ ಪೂರ್ಣಗೊಂಡಿಲ್ಲ, ಇದೆಲ್ಲಾ ಹಂಗಾಮಿ ಸಂಪುಟ ಎಂದು ಮುಜಾಯಿದ್ ತಿಳಿಸಿದ್ದಾರೆ.
ದೇಶದ ಇತರೆ ಪ್ರದೇಶಗಳ ಜನರನ್ನು ಸೇರಿಸಿ ಸಂಪುಟ ರಚನೆಗೆ ನಿರ್ಧಾರ ಮಾಡಿದ್ದು, ಮುಂದಿನ ವಾರ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
Discussion about this post