ಕನ್ನಡನಾಡಿ ಸುದ್ಧಿಜಾಲ: ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ಸಲುವಾಗಿ ಇಂಜಿನಿಯರ್ಸ್ ಡೇ ಎಂದೇ ಆಚರಿಸಲಾಗುತ್ತದೆ.
ವಿಶ್ವೇಶ್ವರಯ್ಯ ಅವರ ಸಾರ್ವಜನಿಕ ಸೇವೆಯನ್ನು ನೋಡಿ ’ನೈಟ್ ಕಮಾಂಡರ್ ಆಫ್ ಬ್ರಿಟಿಷ್ ಇಂಡಿಯನ್ ಎಂಪೈರ್’ (Knight Commander of the British Indian Empire) ಎಂಬ ಬಿರುದು ನೀಡಲಾಗಿದೆ.
SIR. M.V. ಅವರನ್ನು (INSTITUTE OF ENGINEERS) ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯು ಭಾರತದ ಆರ್ಥಿಕ ಯೋಜನೆಯ ರೂವಾರಿ ಎಂದೇ ಬಣ್ಣಿಸಿದೆ.
ಕರ್ನಾಟಕದಲ್ಲಿ ಕೃಷ್ಣ ರಾಜ ಸಾಗರ ಜಲಾಶಯ (ಕೆಆರ್ಎಸ್ ಡ್ಯಾಂ) ನಿರ್ಮಿಸುವುದರಿಂದ ಹಿಡಿದು ಹೈದರಾಬಾದ್ನಲ್ಲಿ ಪ್ರವಾಹ ತಡೆಗಟ್ಟುವಿಕೆ ಯೋಜನೆ ರೂಪಿಸುವ ತನಕ ಸರ್ ಎಂ.ವಿಶ್ವೇಶ್ವರಯ್ಯ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.
ಸರ್ ಎಂ.ವಿ ಹಿನ್ನೇಲೆ ಮತ್ತು ಸಾಧನೆ:
ಸೆಪ್ಟೆಂಬರ್ 15, 1861ರಲ್ಲಿ ಕರ್ನಾಟಕದ ಮುದ್ದೇನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಇವರು, ಬೀದಿ ದೀಪದ ಬೆಳಕಿನಲ್ಲಿ ಓದಿ ನಾಡಿಗೆ ಬೆಳಕು ನೀಡಿದವರಲ್ಲೊಬ್ಬರು.
ಪುಣೆಯ ಖಡಕ್ವಾಸ್ಲ ಜಲಾಶಯದಲ್ಲಿ 1903ರಲ್ಲಿ ನಿರ್ಮಿಸಿದ ಅಟೋಮ್ಯಾಟಿಕ್ ಬ್ಯಾರಿಯರ್ ವಾಟರ್ ಫ್ಲಡ್ಗೇಟ್ಗಳ ಹಿಂದೆ ವಿಶ್ವೇಶ್ವರಯ್ಯ ಇದ್ದರು.
1917ರಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೂ ಕಾರಣಕರ್ತರಲ್ಲೊಬ್ಬರು
ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಯೋಜನೆಗೆ ಮುಖ್ಯಸ್ಥರಾಗಿದ್ದರು
1934ರಲ್ಲಿ ಭಾರತದ ಆರ್ಥಿಕತೆಗೆ ಅನೇಕ ಯೋಜನೆಗಳನ್ನು ರೂಪಿಸಿದ ಸಮಿತಿಯಲ್ಲಿಯೂ ಪಾತ್ರವಹಿಸಿದ್ದರು
1955ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೆ ಪಾತ್ರರಾದರು.

























Discussion about this post