ಚಿಕ್ಕಮಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ನೇತ್ರತ್ವದ ಜನಾಶೀರ್ವಾದ ಯಾತ್ರೆ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದ್ದು, ಜಿಲ್ಲೆಗೆ ಆ.೧೭ಕ್ಕೆ ಆಗಮಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿವೇಣು ಗೋಪಾಲ್ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಸರ್ಕಾರದ ಸಾಧನೆ ಬಗ್ಗೆ ಚರ್ಚಿಸಲು ಕೇಂದ್ರ ಸಚಿವರು ರಾಜ್ಯದಲ್ಲಿ ನಾಲ್ಕು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು
ಕೇಂದ್ರ ಸಚಿವರಾದ ಮೇಲೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರವಾಸ ಮಾಡುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು ಕೆಂದ್ರ ಸರ್ಕಾರದ ಕಾರ್ಯಕ್ರಮಗಳಾದ ಜನಾಶೀರ್ವಾದ ಯಾತ್ರೆ, ರೈತರೊಂದಿಗೆ ಚರ್ಚೆ, ನ್ಯಾಯಾಬೆಲೆ ಅಂಗಡಿ, ಲಸಿಕಾ ಕೇಂದ್ರಗಳಿಗೆ ಬೇಟಿ ನೀಡಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವ ಜೊತೆ ದೇವಸ್ಥಾನಗಳಿಗೆ ಬೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎಂದರು.ಅ.೧೭ ರಂದು ಸಂಜೆ ೬.೩೦ಕ್ಕೆ ಜಿಲ್ಲೆಯ ಬಾಣವರಕ್ಕೆ ಆಗಮಿಸಿ ದೇವನೂರಿನಲ್ಲಿ ಧಾನ್ಯ ಉತ್ಪಾದನಾ ಸಂಸ್ಥೆ ಉದ್ಘಾಟಿಸಿ ಪಕ್ಷದ ಪದಾಧಿಕಾರಿಗಳು, ರೈತರೊಂದಿಗೆ ಸಂವಾದ ನಡೆಸಿ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು
ಆ.೧೮ ರಂದು ಬೆಳಗ್ಗೆ ೯ ಕ್ಕೆ ಜಿಪಂ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ಸುದ್ದಿಗೋಷ್ಟಿ, ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಭಿನಂದನಾ ಸಮಾರಂಭ, ಲಸಿಕಾ ಕೆಂದ್ರಗಳ ಬೇಟಿ, ಲಕ್ಷ್ಮೀಶ ನಗರದಲ್ಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡಿ, ವಸ್ತಾರೆಯಲ್ಲಿ ನ್ಯಾಯಾಬೆಲೆ ಅಂಗಡಿಗೆ ಬೇಟಿ ನೀಡಿ ಎಂದರು.
ಆಲ್ದೂರಿನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ನಂತರ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ದೇವರ ದರ್ಶನ, ಶ್ರೀಗಳ ಆಶೀರ್ವಾದ ಪಡೆದು, ಶೃಂಗೇರಿ ಶಾರದಾಂಭೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಶ್ರೀಗಳ ಆಶಿರ್ವಾದದ ನಂತರ ಸಂಜೆ ಉಡುಪಿಗೆ ತೆರಳಲಿದ್ದಾರೆ. ಒಟ್ಟಾರೆ ೪ ದಿನದಲ್ಲಿ ೭೨ ವಿಧಾನ ಸಭಾ ಕ್ಷೇತ್ರಗಳ ೪ ಸಾವಿರ ಕಿಮೀ ಯಾತ್ರೆ ನಡೆಸಲಿದೆ ಎಂದರು. ನಗರಸಭಾ ಮಾಜಿ ಅಧ್ಯಕ್ಷೆ ಕವಿತಾಶೇಖರ್, ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಸುಧೀರ್ ಇದ್ದರು.

























Discussion about this post