ಚಿಕ್ಕಮಗಳೂರು : ನಗರದ ಇಂದಿರಾಗಾAಧಿ (ಐಜಿ) ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ನಿಲುಗಡೆಗೆ ನಿಷೇಧಿಸಿರುವ ನಿಯಮವನ್ನು ಹಿಂಪಡೆದು ಯಥಾಸ್ಥಿತಿ ಮುಂದುವರಿಸುವAತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ ಈಗಾಗಲೇ ನಗರದಲ್ಲಿನ ಪ್ರಮುಖ ಮೂರು ರಸ್ತೆಗಳು ಕಿರಿದಾಗಿವೆ. ಅದರ ನಡುವೆ ಅವೈಜ್ಞಾನಿಕವಾಗಿ ಐಜಿ ರಸ್ತೆಗೆ ಡಿವೈಡರ್ ನಿರ್ಮಾಣ ಮಾಡಿದ್ದು ರಸ್ತೆ ಕಿರಿದಾದ ಕಾರಣ ಸಾರ್ವಜನಿಕರಿಗೆ ಹಾಗೂ ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ ಇದೀಗ ಏಕಾಏಕಿ ಐಜಿ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ನಿರ್ಬಂಧ ವಿಧಿಸಿರುವುದು ಸಮಂಜಸವಲ್ಲ ಕೂಡಲೇ ನಿಯಮವನ್ನು ಹಿಂಪಡೆಯುವAತೆ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು.
ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸಲಿದ್ದು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳ್ಳುವಂತೆ ವಸತಿ ಗೃಹಗಳಿಗೆ ಆದೇಶ ನೀಡಬೇಕು. ವಾಹನಗಳ ನಿಲುಗಡೆ ಇಲ್ಲದ ದೊಡ್ಡ ಲಾಡ್ಜ್, ಕಾಂಪ್ಲೆಕ್ಸ್ಗಳ ಪರವಾನಗಿ ರದ್ದುಗೊಳಿಸಬೇಕು ಬದಲಾಗಿ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತೆ ವಾಹನಗಳ ಪಾರ್ಕಿಂಗ್ ನಿಷೇಧಿಸಿ ಜನಸಾಮಾನ್ಯರಿಗೆ ತೊಂದರೆ ನೀಡುವುದು ಸರಿಯಲ್ಲ. ಈ ಸಂಬAಧ ಪಾರ್ಕಿಂಗ್ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವAತೆ ಸಂಬAಧಿಸಿದ ಅಧಿಕಾರಿಗಳಿಗೆೆ ಆದೇಶ ನೀಡುವಂತೆ ಮನವಿ ಮೂಲಕ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಮಾರ ಆರ್,ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಅಶೋಕ ಕೆಂಪನಹಳ್ಳಿ, ದಶರಥರಾಜ್ ಅರಸ್, ಮದನ್, ಭರತ್‌ರಾಜ್ ಅರಸ್, ಪಂಚಾಕ್ಷರಿ ಮಹಮದ್ ಹನೀಫ್ ಇದ್ದರು.

























Discussion about this post