ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಹೇರೂರು ಬಳಿಯ ಕೆಮ್ಮಣ್ಣುವಿನ ಶ್ರೀ ಕಾಮಧೇನು ಗೋಸೇವಾ ಟ್ರಸ್ಟ್ಗೆ ಕರ್ನಾಟಕ ಬ್ಯಾಂಕ್ನ ಸಿ.ಎಸ್ಆರ್ ನಿಧಿಯಿಂದ ಸುಮಾರು ೫ ವರೆ ಲಕ್ಷದ ಅಂಬುಲೆನ್ಸ್ ವಾಹನವನ್ನು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಮೂಲಕ ಗೋಸೇವಾ ಟ್ರಸ್ಟ್ಗೆ ಹಸ್ತಾಂತರಿಸಲಾಯಿತು.
ಶ್ರೀ ಕಾಮಧೇನು ಗೋಸೇವಾ ಟ್ರಸ್ಟ್ನ ಅಧ್ಯಕ್ಷ ನಾಗೇಶ್ ಅಂಗೀರಸ ಮಾತನಾಡಿ ದೇಶಿ ಹಸುಗಳ ಸಂವರ್ಧನೆ ಜತೆಗೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಗೋಸೇವಾ ಟ್ರಸ್ಟ್ ಹಲವು ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದೆ. ಇದೀಗ ಅಪಘಾತಕ್ಕೆ ಒಳಗಾದ ಗೋವುಗಳ ಸಾಗಾಣಿಕೆಗೆ ಅನುಕೂಲವಾಗುವಂತೆ ಕರ್ನಾಟಕ ಬ್ಯಾಂಕ್ ತಮ್ಮ ಸಿಎಸ್ಆರ್ ನಿಧಿಯಿಂದ ಅಂಬುಲೆನ್ಸ್ ವಾಹನ ಖರೀSet featured imageದಿಗೆ ನೆರವು ನೀಡಿದೆ ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಟ್ರಸ್ಟ್ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಗೋ ಆಧಾರಿತ ಕೃಷಿ ವ್ಯವಸ್ಥೆ ಜಾರಿಯಲ್ಲಿದ್ದು, ಗೋವುಗಳ ಸಂರಕ್ಷಣೆ ಎಲ್ಲರೂ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಟಿ.ಡಿ. ಜಾನ್ ಮಾತನಾಡಿ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು, ರೈತರು ಒಳಗೊಂಡಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವವರಿಗೆ ಕರ್ನಾಟಕ ಬ್ಯಾಂಕ್ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಇದೀಗ ಸಿಎಸ್ಆರ್ ನಿಧಿಯಿಂದ ನೆರವು ನೀಡುವ ಮೂಲಕ ಗೋಶಾಲೆಗೆ ಅಗತ್ಯವಿರುವ ಅಂಬುಲೆನ್ಸ್ ವಾಹನ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಶ್ರೀರಾಮಅಂಗೀರಸ, ಅರವಿಂದ ಮೋಟಾರ್ಸ್ನ ಸಂದೇಶ ಬಾಳಿಗ ಸೇರಿದಂತೆ ಮತ್ತಿತರರು ಇದ್ದರು.

























Discussion about this post