ಕಾಬೂಲ್: ಅಫ್ಘಾನ್ ದೇಶದ ಅತಿಹೆಚ್ಚು ಜನರು ಜಮಾಯಿಸಿದ್ದಾರೆ ಎನ್ನಲಾದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಸ್ಫೋಟ ನಡೆಸಿದ್ದಾರೆ. ಈ ಕೃತ್ಯ ತಾಲಿಬಾನಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಯಸುವ ಐಸಿಸ್ ಉಗ್ರರದ್ದು ಎಂದು ಶಂಕೆ ವ್ಯಕ್ತವಾಗಿದೆ.
೧೩ಕ್ಕೂ ಅಧಿಕ ಸಾವು ಸಂಭವಿಸಿದ್ದು, ಹೆಚ್ಚಿನ ಜನರಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ. ಬ್ರಿಟನ್ ಉಗ್ರರ ದಾಳಿ ವಿಮಾನ ನಿಲ್ದಾಣದಲ್ಲಿ ಸಂಭವಿಸಬಹುದೆಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.
ಅರ್ಧ ಗಂಟೆ ಅವಧಿಯಲ್ಲಿ ವಿಮಾನ ನಿಲ್ದಾಣದ ಗೇಟ್ ಬಳಿ ಒಂದು ಮತ್ತೊಂದು ವಿಮಾನ ನಿಲ್ದಾಣದ ಹೊರಗೆ ಹೊಟೇಲ್ ಬಳಿ ನಡೆದಿದೆ. ಸ್ಫೋಟಕ್ಕೂ ಮೊದಲು ಅಮೇರಿಕಾ-ರಷ್ಯಾ ಸೈನಿಕರ ಮೇಲೆ ಉಗ್ರರು ಗುಂಡಿನ ಚಕಮಕಿ ನಡೆದಿದ್ದು ಸೈನಿಕರು ಪ್ರತಿ ಧಾಳಿ ನಡೆಸಿದ್ದರು ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಸ್ಫೋಟದ ವೇಳೆ ಅಮೇರಿಕಾದ ಮೂವರು ಸೈನಿಕರು ಗಾಯಗೊಂಡಿದ್ದಾರೆಂದು FACT NEWS ವರದಿ ಮಾಡಿದೆ. ಇವೆಲ್ಲವೂ ಆತ್ಮಾಹುತಿ ದಾಳಿಯ ಕೃತ್ಯಗಳಾಗಿದ್ದು, ಹೋಟೆಲ್ ನಲ್ಲಿ ತಂಗಿದ್ದ ಅಮೇರಿಕಾ, ಬ್ರಿಟನ್ ಸೈನಿಕರನ್ನು ಟಾರ್ಗೆಟ್ ಮಾಡಲು ಈ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ತಲಿಬಾನ್ ಆಗಸ್ಟ್ ೩೧ರೊಳಗೆ ಕಾಬೂಲ್ ತೊರೆಯುವಂತೆ ಅಮೆರಿಕಾ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಗೆ ಸೂಚನೆ ನೀಡಿತ್ತು. ಇನ್ನೂ ಗಡುವು ಮುಗಿದಿಲ್ಲವಾದರೂ ಶತ್ರುಪಾಳಯದಂತೆ ನರಕ ಯಾತನೆ ನಡೆಯುತ್ತಲೇ ಇದೆ.
ಘಟನೆಯಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಪೆಂಟಗನ್ ವಕ್ತಾರ ಜಾನ್ ಕಿರ್ಬಿ ’ವಿಮಾನ ನಿಲ್ದಾಣದ ಹೊರಗೆ ನಡೆದಿರುವ ಸ್ಫೋಟವನ್ನು ದೃಢೀಕರಿಸಬಹುದು ಆದರೆ ಸಾವು-ನೋವುಗಳ ಚಿತ್ರಣ ಅಸ್ಪಷ್ಟವಾಗಿದೆ ಎಂದಿದ್ದಾರೆ.
Discussion about this post