ಅಲ್ಜೀರಿಯಾ: ಉತ್ತರ ಆಫ್ರಿಕನ್ ರಾಷ್ಟ್ರದ ಅಲ್ಜೀರಿಯಾ ರಾಜದಾನಿಯಲ್ಲಿ ಆಕಸ್ಮಿಕ ಕಾಡ್ಗಿಚ್ಚು ಉಂಟಾಗಿದ್ದು ಈ ದುರಂತ ಸಂಭವಿಸಿದೆ.
ಮಂಗಳವಾರ ರಾತ್ರಿ ಕಾಡ್ಗಿಚ್ಚು ಹಬ್ಬಿದ್ದು ೨೫ ಸೈನಿಕರು ಸೇರಿದಂತೆ ೪೨ ಮಂದಿ ಬಲಿಯಾಗಿದ್ದಾರೆ. ರಕ್ಷಣಾ ಸಕ್ರಿಯವಾಗಿ ಸಾಗಿದ್ದು ಈಗಾಗಲೇ ನೂರು ಮಂದಿಗಿಂದ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.
ಆಫ್ರಿಕಾದ ಬರ್ಬರ್ ಹಾಗೂ ಕಬೈಲ್ ಪ್ರದೇಶಗಳಲ್ಲಿ ನಡೆದಿರುವ ಈ ದುರಂತದ ಕುರಿತು ಅಧ್ಯಕ್ಷ ಅಬ್ದೆಲ್ಮಾಡ್ಜಿದ ತೆಬ್ಬೌನ್ ಟ್ವೀಟ್ ಮಾಡಿದ್ದಾರೆ.
ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು ಇನ್ನಷ್ಟು ಜನರನ್ನು ರಕ್ಷಿಸಲಿದ್ದಾರೆ, ೧೧ ಮಂದಿ ರಕ್ಷಿಸುವ ಕಾರ್ಯದಲ್ಲಿ ನಾಲ್ಕು ಮಂದಿ ಸೈನಿಕರು ಗಾಯಗೊಂಡಿದ್ದಾರೆ, ಇನ್ನಷ್ಟು ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಕುರಿತು ಪ್ರಧಾನ ಮಂತ್ರಿ ಬೆನಾಬೆರ ರಹ್ಮನೆ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.
Discussion about this post