ಜೈಪುರ: ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 25 ವರ್ಷದ ವ್ಯಕ್ತಿಗೆ ಜೈಪುರ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕೃತ್ಯ ನಡೆದ ಕೇವಲ 9 ದಿನಗಳಲ್ಲಿ ಅಪರಾಧಿಗೆ ಶಿಕ್ಷೆ ಪ್ರಕಟವಾಗಿದೆ.
ಜೈಲು ಶಿಕ್ಷೆಯ ಜೊತೆಗೇ ಅಪರಾಧಿ ಕಮಲೇಶ್ ಮೀನಾಗೆ ನ್ಯಾಯಾಲಯ ₹2 ಲಕ್ಷ ದಂಡ ವಿಧಿಸಿದೆ. ಪ್ರಕರಣವನ್ನು ಕೋರ್ಟ್‌ಗೆ ಒಯ್ದ ಐದು ‘ಕರ್ತವ್ಯ ದಿನ’ಗಳ ಅವಧಿಯಲ್ಲಿ ತೀರ್ಪು ಪ್ರಕಟವಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಜೈಪುರ ದಕ್ಷಿಣ) ಹರೇಂದ್ರ ಕುಮಾರ್ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಘಟನೆ ವಿವರ:
ಸೆಪ್ಟೆಂಬರ್ 26ರಂದು ಅಪರಾಧಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಸದರಿ ಘಟನೆ ಕುರಿತು ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಹಾಗೂ ತ್ವರಿತಗತಿಯಲ್ಲಿ ನ್ಯಾಯ ನಿರ್ಣಯವಾಗಲು ಯತ್ನಿಸಿದ್ದರು.
ಘಟನೆ ನಡೆದ ೯ ದಿವಸದಲ್ಲಿ ತೀರ್ಪು ಪ್ರಕಟ:
ಜೈಪುರ ಮೆಟ್ರೊಪಾಲಿಟನ್ ಪೋಕ್ಸೊ ನ್ಯಾಯಾಲಯವು ಅತ್ಯಂತ ಕ್ಷಿಪ್ರಗತಿಯಲ್ಲಿ ತೀರ್ಪು ನೀಡಿದೆ.
ಐಪಿಸಿ (ICC) ಮತ್ತು ಪೋಕ್ಸೊ (POCSO) ಕಾಯ್ದೆ ಅಡಿಯಲ್ಲಿ ಸೆಪ್ಟೆಂಬರ್ 26ರ ಮಧ್ಯರಾತ್ರಿ ಕೋತ್ಖವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಮರುದಿನ ಮುಂಜಾನೆ ಆರೋಪಿಯನ್ನು ಬಂಧಿಸಲಾಯಿತು.

























Discussion about this post