ನವದೆಹಲಿ: ಕೋವಿಡ್-19 ದುರಿತದ ಸಂದರ್ಭದಲ್ಲಿ ವಿಮಾ ಕಂಪನಿಗಳು ಶೇ. 97ರಷ್ಟು ವಿಮಾ ಕ್ಲೈಮ್ ಅರ್ಜಿಗಳನ್ನು ಇತ್ಯರ್ಥ ಪಡಿಸಿವೆ ಎಂದು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್ಡಿಎಐ) ತಿಳಿಸಿದೆ.
2020-21ರಲ್ಲಿ ಏಪ್ರಿಲ್ನಿಂದ ಮಾರ್ಚ್ ಅವಧಿಯಲ್ಲಿ 21,836 ಕೋವಿಡ್ ಮರಣದ ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಪೈಕಿ 21,304 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದರಲ್ಲಿ ಎರಡು ಲಕ್ಷ ರೂಪಾಯಿ ಮೊತ್ತವನ್ನು ಒಳಗೊಂಡ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ (ಪಿಎಂಜೆಜೆಬಿವೈ) ಕ್ಲೈಮುಗಳೂ ಸೇರಿವೆ ಎಂದು ಐಆರ್ಡಿಎಐ ವಾರ್ಷಿಕ ವರದಿ ತಿಳಿಸಿದೆ.
ಕೊರೊನಾ ಸಂಬಂಧಿತ ಕ್ಲೇಮು ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಜೀವ ವಿಮಾ 1ಮತ್ತು ಆರೋಗ್ಯ ವಿಮಾ ಕಂಪನಿಗಳಿಗೆ ಐಆರ್ಡಿಎಐ ಸೂಚಿಸಿದೆ.
ಮರಣ ಪ್ರಕರಣಗಳಲ್ಲಿ 175 (ಶೇ. 0.8) ಕ್ಲೈಮುಗಳನ್ನು ವಿಮಾ ಕಂಪನಿಗಳು ತಿರಸ್ಕರಿಸಿವೆ. 357 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. 2020-21ನೇ ಸಾಲಿನಲ್ಲಿ ಮೊದಲರ್ಧ ಭಾಗಕ್ಕಿಂತ ಎರಡನೇ ಭಾಗದಲ್ಲಿ ಕ್ಲೈಮುಗಳು ಸಂಖ್ಯೆ ಕೊರೊನಾ 2ನೇ ಅಲೆಯ ಕಾರಣ ಹೆಚ್ಚು ಇದ್ದವು ಎಂದು ಐಆರ್ಡಿಎಐ ಹೇಳಿದೆ.
1,617.45 ಕೋಟಿ ರೂಪಾಯಿ ಮೊತ್ತದ ಕ್ಲೈಮು ಸಲ್ಲಿಕೆ ಆಗಿತ್ತು. ಇದರಲ್ಲಿ 1,418.71 ಕೋಟಿ ರೂಪಾಯಿ ಪಾವತಿ ಆಗಿದೆ. ಮೊತ್ತದ ಲೆಕ್ಕದಲ್ಲಿ ಎಂದು ಮಾಹಿತಿ ನೀಡಿದೆ. ಕೋವಿಡ್-19 ಜತೆಗೆ ಇತರ ಪ್ರಕರಣಗಳೂ ಸೇರಿದೆರೆ ಒಟ್ಟಾರೆ ಶೇ. 98.39 ಕ್ಲೈಮು ಇತ್ಯರ್ಥ ಆಗಿದೆ ಎಂದು ಹೇಳಿದೆ.
Life insurers settled 97% of COVID-19 death claims: IRDAI annual report
ಇದನ್ನು ಓದಿ: ಎಲ್ಐಸಿ ವಿಮಾ ಕಂತನ್ನು ಪಿಎಫ್ ಮೂಲಕವೂ ಜಮಾ ಮಾಡಲು ಅವಕಾಶ
ಇದನ್ನೂ ಓದಿ: ಪಾಲಿಸಿದಾರರ ಸದ್ಯದ ಆರೋಗ್ಯ ಪರಿಗಣಿಸಿ ಕ್ಲೈಮು ತಿರಸ್ಕರಿಸುವಂತಿಲ್ಲವೆಂದ ಸುಪ್ರೀಂಕೋರ್ಟ್
Discussion about this post