ಚಿಕ್ಕಮಗಳೂರು,ಅಕ್ಟೋಬರ್.೦೪:- ಕ್ರಿಶ್ಚಿಯನ್ ವಿವಿದೋದ್ದೇಶ ಸಹಕಾರ ಸಂಘ ನಿ, ೨೦೨೦-೨೧ನೇ ಸಾಲಿನಲ್ಲಿ ೧೮.೨೦ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಫ್.ಲೂಯೀಸ್ ಹೇಳಿದರು.
ಅವರು ಇಲ್ಲಿನ ಸಂತ ಜೋಸೆಫರ ಜೂಬಿಲಿ ಹಾಲ್ ಸಭಾಂಗಣದಲ್ಲಿ ಸಂಘದ ೧೨ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ೮ ಕೋಟಿ ರೂ.ಗಳ ವಾರ್ಷಿಕ ವ್ಯವಹಾರ ನಡೆಸಲಾಗಿದೆ. ಮಾರ್ಚ್ ಅಂತ್ಯಕ್ಕೆ ೨.೨೯ ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದ್ದು, ವಿವಿಧ ಯೋಜನೆಯಡಿ ೨.೫೮ ಕೋಟಿ ರೂ. ಸದಸ್ಯರಿಗೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಸಹಕಾರಿ ಸಂಘದ ಆಡಳಿತ ಕಛೇರಿ ಕಟ್ಟಡವನ್ನು ೨೭.೩೫ ಲಕ್ಷ ರೂ. ವೆಚ್ಚದಲ್ಲಿ ಕ್ರಯಕ್ಕೆ ಪಡೆಯಲಾಗಿದೆ. ಇದರಿಂದ ಸಂಘಕ್ಕೆ ಸ್ವಂತ ಕಟ್ಟಡ ಹೊಂದಿದ್ದು, ಇದರೊಂದಿಗೆ ಕಳೆದ ಸಾಲಿನಲ್ಲಿ ೨೫.೧೮ ಲಕ್ಷ ರೂ. ವೆಚ್ಚದಲ್ಲಿ ಸಂಘಕ್ಕೆ ನಿವೇಶನವನ್ನು ಸಹ ಖರೀದಿಸಲಾಗಿದೆ. ಇದರಿಂz ಒಟ್ಟು ೫೨.೫೩ ಲಕ್ಷ ರೂ.ಗಳ ಸ್ಥಿರಾಸ್ತಿ ಸಂಘ ಹೊಂದಿದೆ. ಈ ವರ್ಷದಿಂದ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಕಿರು ಸಾಲ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕು ಎಂದರು.
ಕಳೆದ ಸಾಲಿನ ನಿವ್ವಳ ಲಾಭಾಂಶದಲ್ಲಿ ಷೇರುದಾರರಿಗೆ ಶೇ.೧೩.೫೦ ರ ಲಾಭಾಂಶ ನೀಡಲು ನಿರ್ಧರಿಸಲಾಗಿದ್ದು, ಸಿಬ್ಬಂದಿಗಳಿಗೆ ೦೨ ತಿಂಗಳ ಬೋನಸ್ ನೀಡಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಫೆಲಿಕ್ಸ್ ಸಿಕ್ವೇರ್ ೨೦೨೦-೨೧ ನೇ ಸಾಲಿನ ಲೆಕ್ಕ ಪರಿಶೋಧನಾ ಆರ್ಥಿಕ ತಃಖ್ತೆಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.
ಸಭೆಯಲ್ಲಿ ಸಂಘದ ನಿರ್ದೇಶಕರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ವಿ.ಟಿ.ಥಾಮಸ್ ಸಹಕಾರಿ ಸಂಘದ ಬೆಳವಣಿಗೆ ಬಗ್ಗೆ ಮಾತನಾಡಿದರು. ಸಂಘದ ಕಾರ್ಯದರ್ಶಿ ಶಶಿರೇಖ ಟಿ ಇವರು ಆಡಳಿತ ಮಂಡಳಿ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ವಾರ್ಷಿಕ ಸಭೆಯ ನಿರೂಪಣೆಯನ್ನು ನಿರ್ದೇಶಕ ಜೇಮ್ಸ್ ಡಿಸೋಜ ನಡೆಸಿದ್ದು, ನಿರ್ದೇಶಕರಾದ ಸಲ್ವಾದರ್ ಪಾಯಿಸ್ ಎಲ್ಲರನ್ನು ಸ್ವಾಗತಿಸಿದರು, ಕ್ರಿಸ್ಟೋಫರ್ ಜಾರ್ಜ್ ವಂದಿಸಿದರು. ನಿರ್ದೇಶಕ ರೂಬನ್ ಮೋಸೆಸ್ ದೇವತಾ ಪ್ರಾರ್ಥನೆ ಮಾಡಿದರು.
ನಿರ್ದೇಶಕರಾದ ಪಿ.ಜೆ.ಪ್ರಾನ್ಸಿಸ್ ರೊನಾಲ್ಡಾ ಸೆರಾವೊ, ಜೀವನ್ ಪಿಂಟೋ, ಮ್ಯಾಕ್ಸಿಮ್ ಕಾಲೋ, ಸೆಲಸ್ಟಿನ್ ಡಿಸೋಜ ಇದ್ದರು. ಸರ್ವ ಸದಸ್ಯರ ಆಹ್ವಾನ ಪತ್ರಿಕೆಯನ್ನು ಕಚೇರಿಸಿ ಸಿಬ್ಬಂದಿ ಸನೀತ ಓದಿದರು.

























Discussion about this post