ಗುಜರಾತ್: ಭೂಪೇಂದ್ರ ಪಟೇಲ್ ಗುಜರಾತ್ ಘಾಟ್ ಲೂಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರು. ವಿಜಯ್ ರೂಪಾನಿ ರಾಜಿನಾಮೆಯಿಂದ ತೆರವುಗೊಂಡಿದ್ದ ಮುಖ್ಯಮಂತ್ರಿ ಪಟ್ಟಕ್ಕೆ ಭೂಪೇಂದ್ರ ಪಾಟೀಲ್ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.
ಮುಂದಿನ ಮುಖ್ಯಮಂತ್ರಿ ಯಾರ ಪಾಲಾಗುವುದು ಎಂಬುದು ಭಾರಿ ಕುತೂಹಲ ಸೃಷ್ಠಿಸಿತ್ತು. BLP ಸಭೆ ಕೂಡ ಸದರಿ ವಿಚಾರದ ಕುರಿತು ಇತ್ತು. ಸಚಿವರಾದ ಪ್ರಲ್ಹಾದ್ ಜೋಷಿ, ನರೇಂದ್ರ ತೋಮರ್ ಕೇಂದ್ರದ ವೀಕ್ಷಕರಾಗಿದ್ದರು.
ಸಭೆಯ ನಂತರ ಭೂಪೇಂದ್ರ ಪಾಟೀಲ್ ಸಿಎಂ ಎಂದು ಆಯ್ಕೆಯಾಗಿದ್ದು, ಇವರ ಹೆಸರು ವಿಜಯ್ ರೂಪಾನಿಯವರೇ ಸೂಚಿಸಿದ್ದರು ಎಂದು ಸಹ ಹೇಳಲಾಗಿದೆ. ಇದೇ ವೇಳೆ ಪ್ರಫುಲ್ ಪಟೇಲ್, ಸಚಿವ ಮನ್ ಸುಖ ಮಾಂಡವೀಯಾ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬಂದಿದ್ದುವು.
ಘಾಟ್ಲೋಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವುದರ ಜೊತೆಗೆ ಭೂಪೇಂದ್ರ ಪಟೇಲ್ಗೂ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ವಿರುದ್ಧ ಬರೋಬ್ಬರಿ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಭೂಪೇಂದ್ರ ಪಟೇಲ್ಗೂ ಮೊದಲು ಆನಂದಿಬೆನ್ ಪಟೇಲ್ (ಉತ್ತರಪ್ರದೇಶದ ಈಗಿನ ರಾಜ್ಯಪಾಲರು) ಅಭ್ಯರ್ಥಿಯಾಗಿದ್ದರು. ವಿಶೇಷವೆಂದರೆ ಆನಂದಿ ಬೆನ್ ಪಟೇಲ್ ಇದೇ ಕ್ಷೇತ್ರದಿಂದ ಗೆದ್ದು ಗುಜರಾತ್ ಮುಖ್ಯಮಂತ್ರಿ(2014-2016) ಆಗಿದ್ದರು .
ಇಂಜನಿಯರಿಂಗ್ ಓದಿದ್ದ ಭೂಪೇಂದ್ರ ಪಟೇಲ್ ಅವರು ಈ ಹಿಂದೆ ಅಹ್ಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (AUDA)ರಾಗಿ, ಅಮದ್ವಾಡ ಮುನ್ಸಿಪಲ್ ಕಾರ್ಪೋರೇಶನ್ ಸ್ಥಾಯಿ ಸಮಿತಿ (AMC) ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದಾರೆ.

























Discussion about this post