ಬೀಜಿಂಗ್: ಚೀನಾದ ಯುಟು-2 ರೋವರ್ ಚಂದ್ರನ ಅಂಗಳದಲ್ಲಿ ಕ್ಯೂಬ್ ಆಕಾರದ ಮನೆ ರೀತಿಯ ನಿಗೂಢ ಮಾದರಿಗಳನ್ನು ಪತ್ತೆ ಹಚ್ಚಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ಹೇಳಿಕೊಂಡಿದೆ. ಇದರ ಚಿತ್ರಗಳು ಸ್ಪೇಸ್ಡಾಟ್ಕಾಂ ಪ್ರಕಟಿಸಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಚಾಂಗೆ-4 ಮಿಷನ್ನ ಭಾಗವಾಗಿರುವ ಯುಟು-2 ರೋವರ್ನನ್ನು 2019ರಲ್ಲಿ ಉಡಾವಣೆ ಮಾಡಲಾಗಿದ್ದು, ಚಂದ್ರನಲ್ಲಿ ಅನ್ವೇಷಣೆಯಲ್ಲಿ ತಂದಿದೆ. ಚಂದ್ರನ ವಾನ್ ಕರ್ಮನ್ ಕುಳಿಯಿಂದ ಮೀಟರ್ ದೂರದಲ್ಲಿ ಮನೆಯಂತಹ ನಿಗೂಢ ಕ್ಯೂಬ್ಗಳು ಕಂಡಿವೆ. ಆಬಲಿಸ್ಕ್ ಅಥವಾ ಎಲ್ಯನ್ಸ್ ಅಲ್ಲವಾದ್ದಿರಿಂದ ಈ ಬಗ್ಗೆ ಖಂಡಿತ ಹೆಚ್ಚಿನ ಪರಿಶೀಲನೆ ಅಗತ್ಯ ಎಂದು ಸ್ಪೇಸ್ಡಾಟ್ಕಾಂ ವರದಿ ಮಾಡಿದೆ.
ಸಿಎನ್ಇಟಿ ಇದನ್ನು ‘ನಿಗೂಢ ಮನೆ’ ಎಂದು ವಿಶ್ಲೇಷಿಸಿದ್ದು, ವಿಜ್ಞಾನಿ ಈ ಬಗ್ಗೆ ಹೆಚ್ಚು ಕುತೂಹಲ ವ್ಯಕ್ತಪಡಿಸಿದ್ದಾರೆ. ಅಧ್ಯಯನವನ್ನು ಆರಂಭಿಸಿದ್ದಾರೆ.
ಚಂದ್ರನ ಅಂಗಳದಲ್ಲಿ ಕಾಣಿಸಿರುವುದು “ನಿಗೂಢ ಮನೆ’ಯಲ್ಲಿ ಅದು ಬಂಡೆಗಲ್ಲು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
2019ರಲ್ಲಿ ಇದೇ ರೋವರ್ ಹಸಿರು ಬಣ್ಣದ ಜೆಲ್ ತರಹದ ವಸ್ತುವನ್ನು ಪತ್ತೆ ಮಾಡಿತ್ತು. ನಂತರ ಇದು ಶಿಲೆಯ ತುಣುಕು ಅಥವಾ ಬಂಡೆಯ ಅಂಶವಿರುವ ಘನ ಎಂದು ಖಾತರಿ ಆಯಿತು. ಇದು ಅನೇಕ ವರ್ಷಗಳ ಕಾಲ ಖನಿಜ ಮತ್ತು ಬಂಡೆಗಳು ಬೆಸೆಯುವಿಕೆಯಿಂದ ಆಗುವ ಆಕಾರ ಎಂದು ವಿಶ್ಲೇಷಿಸಲಾಗಿತ್ತು. ಇತ್ತೀಚೆಗೆ ರೋವರ್ ಪತ್ತೆ ಮಾಡಿದ ವಸ್ತುವೊಂದು ಬಂಡೆಯ ಪಳೆಯುಳಿಕೆ ಎಂದು ಹೇಳಲಾಗಿದೆ.
Chinese Rover Spots Cube-Shaped “Mystery House” On Moon
ಇದನ್ನು ಓದಿ: ಮಂಗಳ ಗ್ರಹದ ಅಂಗಳದಿ ಜಲದ ಸುಳಿವು
ಇದನ್ನೂ ಓದಿ: ಗುರುವಿನ ಕ್ಷುದ್ರಗ್ರಹ ಅನ್ವೇಷಣೆಗೆ ನಾಸಾದ ಗಗನನೌಕೆ
Discussion about this post