ನವದೆಹಲಿ: ಋತುಮಾನ ಬದಲಾವಣೆ ಕಾಲದಲ್ಲಿ ದೇಹದ ಬಾಹ್ಯ ಮತ್ತು ಶರೀರದೊಳಗಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ. ಹೀಗಾಗುವುದನ್ನು ತಡೆಯಲು ಪೌಷ್ಟಿಕಾಂಶಯುಕ್ತ ಆಹಾರ ತೆಗೆದುಕೊಳ್ಳಬೇಕು. ದೇಹವನ್ನು ಬೆಚ್ಚಗಿರಿಸುವ ಉಡುಪನ್ನು ಹಾಕಿಕೊಳ್ಳಬೇಕು.
ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಅಜ್ರಾ ಖಾನ್ ಐದು ಸಲಹೆ ನೀಡಿದ್ದಾರೆ. ಇದರಿಂದ ದೇಹಕ್ಕೆ ಪುಷ್ಟಿ ಸಿಗುವುದರ ಜತೆಗೆ ತೂಕವನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದ್ದಾರೆ.
1. ಕ್ಯಾರೆಟ್ನಲ್ಲಿ ನಾರನಂಶ ಹೆಚ್ಚಿರುವುದರಿಂದ ಪಚನ ಕ್ರಿಯೆ ಸಲೀಸಾಗುತ್ತದೆ. ಜೀರ್ಣ ಕ್ರಿಯೆ ದೀರ್ಘವಾಗಿರುವುದರಿಂದ ಪದೇ ಪದೆ ಹಸಿವಾಗುವುದಿಲ್ಲ ಮತ್ತು ಇದು ಕಡಿಮೆ ಕ್ಯಾಲೊರಿ ಮತ್ತು ಪಿಷ್ಟವನ್ನು ಹೊಂದಿರುವ ಕಾರಣ ದೇಹದ ತೂಕ ಹೆಚ್ಚಾಗುವುದಿಲ್ಲ. ಹಸಿಯಾಗಿ ಸಲಾಡ್ ರೂಪದಲ್ಲಿ, ಸೂಪ್, ಪಲ್ಯದ ರೂಪದಲ್ಲಿ ಇದನ್ನು ತೆಗೆದುಕೊಳ್ಳಬಹುದು.
2. ದಾಲ್ಚಿನ್ನಿ ಅತ್ಯುಪಯುಕ್ತ ಸಾಂಬರ ಪದಾರ್ಥ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕ ಒಂದೆರಡು ಪೌಂಡ್ ಇಳಿಯುತ್ತಿದೆ. ಚಳಿಗಾಲದಲ್ಲಿ ಇದರ ಕಷಾಯ ಕುಡಿಯುವುದರಿಂದ ಶೀತ, ನೆಗಡಿಯನ್ನು ತಡೆಯಬಹುದು. ದೇಹ ಬೆಚ್ಚಗೆ ಇರುತ್ತದೆ. ಕೊಬ್ಬನ್ನು ಕರಗಿಸುವ ದಾಲ್ಚಿನ್ನಿ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇನ್ಸುಲಿನ್ ಅಂಶ ಇರುವಕಾರಣ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
3. ಮೆಂತ್ಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ಮೆಂತ್ಯ ಕಾಳನ್ನು ನೀರಿನಲ್ಲಿ ನೆನಸಿ ಹಾಗೆಯೇ ತೆಗೆದು ಕೊಳ್ಳಬಹುದು ಇಲ್ಲವೆ ಬೇಯಿಸಿದ ಆಹಾರದ ಜತೆಗೆ ಬಳಕೆ ಮಾಡಬಹುದು. ಮೆಂತ್ಯದ ಸೊಪ್ಪನ್ನು ತೊಳೆದು ಹಾಗಯೇ ಸೇವಿಸುವುದು, ಇಲ್ಲವೆ ಬೇಯಿಸಿ ಆಹಾರವಾಗಿ ಬಳಕೆ ಮಾಡಬಹುದು. ಚಯಾಪಚಯ ಕ್ರಿಯೆ, ನೀರಿನಲ್ಲಿ ಕರಗುವಿಕೆಯಿಂದ ಬಾಯಿ ಚಪಲವನ್ನು ನಿಯಂತ್ರಿಸುತ್ತದೆ.
4. ಸೀಬೆಕಾಯಿ ಅಥವಾ ಪೇರಲದ ಹಣ್ಣು ಸೇವನೆಯಿಂದ ನಿತ್ಯ ದೇಹಕ್ಕೆ ಬೇಕಾಗುವ ನಾರಿನಂಶದಲ್ಲಿ ಶೇ. 12ರಷ್ಟು ಇದರಿಂದ ದೊರೆಯುತ್ತದೆ. ಪಚನ ಶಕ್ತಿಯನ್ನು ಹೆಚ್ಚಿಸುತ್ತದೆ. ಪಚನ ಶಕ್ತಿ ವೃದ್ಧಿಸಿದಷ್ಟು ಕೊಬ್ಬಿನಂಶ ಕರಗುತ್ತದೆ. ಇದರಿಂದ ದೇಹದ ತೂಕ ಇಳಿಕೆ ಆಗುತ್ತದೆ.
5. ಪಾಲಕ್ ಸೊಪ್ಪು/ಹಸಿರು ತರಕಾರಿ ಸೇವನೆಯಿಂದ ಅಧಿಕವಾಗಿರುವ ತೂಕವನ್ನು ಕಳೆದುಕೊಳ್ಳಬಹುದು. ಒಂದು ಬಟ್ಟಲು ಪಾಲಕ್ ಸೊಪ್ಪಿನ ರಸ ಸೇವನೆಯಿಂದ ಕಬ್ಬಿನಂಶ ಕರಗಿಸಬಹುದು. ಪಾಲಕ್ ಸೊಪ್ಪಿನಲ್ಲಿ ನಾರಿನಂಶ ಅಧಿಕವಾಗಿರುವ ಕಾರಣ ಪೋಷಕಾಂಶಯುಕ್ತ ಆಹಾರ. ಹಸಿರು ತರಕಾರಿ ರಸ ಸೇವನೆಯೂ ತೂಕ ಇಳಿಸಲು ಸಹಾಯಕ.
Five Winter Foods For Healthy Weight Loss
ಇದನ್ನು ಓದಿ: World Diabetes Day: ಹೇಗಿವೆ ನಿಮ್ಮ ಜೀವನಶೈಲಿಯ ಅಭ್ಯಾಸಗಳು ಹಾಗೂ ಹವ್ಯಾಸಗಳು?
ಇದನ್ನೂ ಓದಿ: ಹೆಚ್ಚು ತರಕಾರಿ ಸೇವಿಸಿ; ಪಾರ್ಶ್ವವಾಯುವಿನಿಂದ ದೂರವಿರಿ
Discussion about this post