ಚಿಕ್ಕಮಗಳೂರು : ಕಳಸಾ ತಾಲ್ಲೂಕಿನ ತಲಗೋಡು ಗ್ರಾಮದ ರಸ್ತೆ ದುರಸ್ಥಿ ಮಾಡದೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷö್ಯ ಖಂಡಿಸಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ಗ್ರಾಮಸ್ಥರು ಬ್ಯಾನರ್ ಪ್ರದರ್ಶನ ಮಾಡಿದ್ದಾರೆ.
ಗ್ರಾಮದ ಹದಗೆಟ್ಟ ರಸ್ತೆ ದುರಸ್ಥಿಪಡಿಸುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಮಾಡಿದ್ದರೂ ಕಳೆದ ೧೦ ವರ್ಷಗಳಿಂದ ನಿರ್ಲಕ್ಷö್ಯ ವಹಿಸಲಾಗಿದೆ ಎನ್ನುವುದು ಸ್ಥಳೀಯರ ದೂರು. ಮುಂಬರುವ ತಾ.ಪಂ, ಜಿ.ಪಂ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮದ ರಸ್ತೆ ಬಳಿ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲಗೋಡು ಗ್ರಾಮದಿಂದ ತೋಟದೂರು ರಸ್ತೆ ಸಂಪರ್ಕದ ಸುಮಾರು ೧೨ ಕಿ.ಮೀ ಕ್ರಮಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ ತಲಗೋಡಿನಿಂದ ಬಾಳೆಕೊಂಡ, ಹಳ್ಳದಾಚೆ, ನೆಲ್ಲಿಕೋಟ ಗ್ರಾಮಗಳ ಮೂಲಕ ತೋಟದಾರು ಮುಖ್ಯರಸ್ತೆಗೆ ಸಂಪರ್ಕಿಸುವ ಈ ರಸ್ತೆ ಹಿಂದೊಮ್ಮೆ ಡಾಂಬರೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದುವರೆಗೂ ದುರಸ್ಥಿ ಕಾರ್ಯ ನಡೆಸಿಲ್ಲ ಈಗಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ್ದಾರೆ.
ಮಳೆಗಾಲದಲ್ಲಿ ವಾಹನ, ಪಾದಚಾರಿಗಳ ಸಂಚಾರ ದುಸ್ತರವಾಗಿದೆ. ಕಿತ್ತುಹೋಗಿರುವ ಹಳೇ ರಸ್ತೆಗಳ ಮೂಲ ಸ್ವರೂಪವೇ ಬದಲಾಗಿದೆ, ಇಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕುಟುಂಬಗಳು ಈ ಭಾಗದಲ್ಲಿ ವಾಸವಿದ್ದು ಮಳೆಗಾಲದಲ್ಲಿ ಈ ರಸ್ತೆಗಳು ಹಳ್ಳದಂತಾಗುತ್ತದೆ ಶಾಲಾ-ಕಾಲೇಜಿಗೆ ತೆರಳುವ ಮಕ್ಕಳು ಕೆಸರುಮಯ ರಸ್ತೆಯಲ್ಲಿ ಸಂಚರಿಸಬೇಕಿದೆ ಎಂದು ಆಕ್ರೋಶ ಜನಶಕ್ತಿ ವಿಕಾಸ ಸಮಿತಿ ಕಾರ್ಯದರ್ಶಿ ಮಂಜುನಾಥ್ ತಿಳಿಸಿದ್ದಾರೆ.

























Discussion about this post