ಟೋಕಿಯೋ:ಜಪಾನ್ ದೇಶದಲ್ಲಿಂದು ಪ್ರಬಲ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪನದಲ್ಲಿ ೫.೨ರಷ್ಟು ತೀವ್ರತೆ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗೆ ಕಾದು ನೋಡಬೇಕಿದೆ. ಕೇಂದ್ರ ಬಿಂದು ಉತ್ತರಕ್ಕೆ ೩೭.೬ ಡಿಗ್ರಿ ಅಕ್ಷಾಂಶ ಮತ್ತು ಪೂರ್ವಕ್ಕೆ ೧೪೧.೭ ಡಿಗ್ರಿ ರೇಖಾಂಶ ಮತ್ತು ೬೦ ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಜಪಾನಿನ ಹವಾಮಾನ ಸಂಸ್ಥೆ (JMA) ವರದಿ ಮಾಡಿದೆ.
ಜಪಾನ್ ದೇಶದ ಪಿಕುಶಿಮಾ ಪ್ರಿಫೆಕ್ಟರ್ ನಲ್ಲಿ ನಡೆದ ಭೂಕಂಪನ ತೀವ್ರತೆ ರಿಕ್ಟರ್ ಮಾಪನದಲ್ಲಿ ೫.೨ ಎಂದು ದಾಖಲಾಗಿದೆ. ಜಪಾನಿನಲ್ಲಿ ಭೂಕಂಪನ (Japan Earthquake) ಕಾಮನ್ ಆಗಿದ್ದರೂ ಸಹ, ಭೂಕಂಪನದೊಂದಿಗೆ ಧೈರ್ಯವಾಗಿ ಬದುಕುತ್ತಿರುವ ಅವರ ಆತ್ಮಸ್ಥೈರ್ಯ ಮೆಚ್ಚಲೇಬೇಕು.
Discussion about this post