ಚಿಕ್ಕಮಗಳೂರು: ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ೨೩ ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಮಂಗಳವಾರ ಜಿಲ್ಲೆಯ ೪೮ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ತಾಲ್ಲೂಕಿನ ೮ಮಂದಿ, ಕಡೂರಿನ ಇಬ್ಬರು, ಮೂಡಿಗೆರೆಯ ಮೂವರು, ನರಸಿಂಹರಾಜಪುರದ ೩೧ ಮಂದಿ ಹಾಗೂ ಕೊಪ್ಪ ತಾಲ್ಲೂಕಿನ ೪ಮಂದಿಯಲ್ಲಿ ಸೋಂ ಕು ಕಾಣಿಸಿಕೊಂಡಿದೆ. ೪೮ಮಂದಿಯನ್ನು ಹೋಮ್ ಐಸೋಲೇಶನ್ಗೆ ಒಳಪಡಿಸಲಾಗಿ ದೆ.
ಇಂದು ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಕೋವಿಡ್ ಸೋಂಕು ಕಾರಣದಿಂದ ಮೃತಪಟ್ಟಿಲ್ಲ ವೆಂದು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಇದುವರೆಗೂ ಜಿಲ್ಲೆಯಲ್ಲಿ ೫೦,೯೭೩ಮಂದಿ ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೫೦,೧೫೧ ಮಂದಿ ಗುಣಮುಖರಾಗಿದ್ದಾರೆ. ೪೦೪ಮಂದಿ ಯಲ್ಲಿ ಸೋಂಕು ಸಕ್ರೀಯವಾಗಿದ್ದು, ಇದುವರೆಗೂ ೩೯೫ಮಂದಿ ಮೃತಪಟ್ಟಿದ್ದಾರೆ.

























Discussion about this post