ಚಿಕ್ಕಮಗಳೂರು: ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 38 ಮಂದಿ ಸೋ ಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯ 63 ಮಂದಿಯಲ್ಲಿ ಸೋಂಕು ಪತ್ತೆ ಯಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ೨೬, ಕಡೂರು ೯, ತರೀಕೆರೆ ೪, ಮೂಡಿಗೆರೆ ೮, ನರಸಿಂಹ ರಾಜಪುರ ೩, ಕೊಪ್ಪ ೮ ಹಾಗೂ ಶೃಂಗೇರಿಯ ೫ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿ ದೆ. ೬೧ಮಂದಿಯನ್ನು ಹೋಮ್ ಐಸೋಲೇಶನ್ಗೆ ಒಳಪಡಿಸಲಾಗಿದೆ. ಇಬ್ಬರು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಕೋವಿಡ್ನಿಂದ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲವೆಂದು ಆರೋಗ್ಯ ಇಲಾಖೆ ತಿಳಿಸಿದ್ದು, ಜಿಲ್ಲೆಯಲ್ಲಿ ಇದುವರೆಗೂ ೫೦,೮೫೧ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೪೯,೯೯೨ಮಂದಿ ಗುಣಮುಖರಾಗಿದ್ದಾರೆ. ೪೨೬ಮಂದಿಯಲ್ಲಿ ಸೋಂಕು ಸಕ್ರೀಯವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ೩೯೫ಮಂದಿ ಮೃತಪಟ್ಟಿದ್ದಾರೆ.

























Discussion about this post