ಬೀಜಿಂಗ್: ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ (China Liberation Army-PLA) ಟಿಬೆಟ್ ಮಿಲಿಟರಿ ಕಮಾಂಡ್ ಟಿಬೆಟ್ ಭೂಭಾಗದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಇದರಲ್ಲಿ ಚೀನಾದ PLA TIBET COMMONDನ ಸುಮಾರು ಹತ್ತು ಬ್ರಿಗೇಡ್ ನ ಐವತ್ತು ಸಾವಿರ ಯೋಧರು ಪಾಲ್ಗೊಂಡಿದ್ದರು.
ಚೀನಾ ತಾನು ಹೊಂದಿದ್ದ ಆಧುನಿಕ ಶಸ್ತ್ರಾಸ್ತ್ರಗಳ ಪೆರೇಡ್ ನಡೆಸಿತ್ತು ಎಂದು ವರದಿಯಾಗಿದೆ. ಈ ಹಿಂದೆ ಸಹ ಇಂಥದ್ದೇ ಅಭ್ಯಾಸವನ್ನು ಸುಮಾರು ೬,೧೦೦ ಮೀಟರ್ ಎತ್ತರದಲ್ಲಿ ನಡೆಸಿತ್ತೆಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಸದಾ ಭಾರತದ ಮೇಲೆ ದ್ವಂದ್ವ ನೀತಿ ಅನುಸರಿಸುತ್ತಾ, ಯುದ್ಧದ ಗೀಳು ಹಿಡಿಸಿಕೊಂಡಿರುವ ಚೀನಾದ ಈ ನಡೆ, ಭಾರತವನ್ನು ಇನ್ನಷ್ಟು ಎಚ್ಚರದಿಂದ ಇರುವಂತೆ ಮಾಡಿರುವುದಂತೂ ಸತ್ಯ.
Discussion about this post