ಚಿಕ್ಕಮಗಳೂರು: ದತ್ತಪಾದುಕೆಯ ಪೂಜೆಗೆ ಅವಕಾಶ ನಿರಾಕರಣೆ ಹಿನ್ನೆಲೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಪ್ರತಿಭಟನೆ ನಡೆಸಿರುವ ಘಟನೆ ದತ್ತಪೀಠದಲ್ಲಿ ಗುರುವಾರ ನಡೆದಿದೆ.
ದತ್ತ ಗುಹೆಯೊಳಗೆ ಇರುವ ಪಾದುಕೆಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಭಜನೆ ಮಾಡುವ ಮೂಲಕ ಮನವಿ ಮಾಡಿದ್ದಾರೆ. ಪೂಜೆಗೆ ಅವಕಾಶ ನೀಡಲು ನಿರಾಕರಿಸಿದ ಹಿನ್ನಲೆ ಪಾದುಕೆ ಎದುರು ಧರಣಿ ಕೈಗೊಂಡಿದ್ದಾರೆ.
ಪೂಜೆಗೆ ಅವಕಾಶ ನೀಡುವವರೆಗೂ ಇಲ್ಲಿಂದ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಗುಹೆಯೊಳಗೆ ಭಜನೆಗೆ ಕುಳಿತಿದ್ದ ಸ್ವಾಮೀಜಿಗೆ ಶ್ರೀರಾಮ ಸೇನೆ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಸೇರಿದಂತೆ ಕಾರ್ಯಕರ್ತರು ಸಹಕರಿಸಿದರು.

























Discussion about this post