ಚಿಕ್ಕಮಗಳೂರು: ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಿಸಿದ ಗೋರಿಗಳನ್ನು ಸ್ಥಳಾಂತರ ಮಾಡಿ ಎಂದು ಐ.ಡಿ ಪೀಠದಲ್ಲಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ದತ್ತ ಪೀಠ ದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಮಾಡಬೇಕೆಂಬ ಹೈಕೋರ್ಟ್ ಸೂಚನೆ ನಿರ್ದೇಶನದ ಪರವಾಗಿ ಈ ಸೂಚನೆ ನೀಡುವುದಾಗಿ ಅವರು ಹೇಳಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಬೇರೆ, ನಾಗೇನಹಳ್ಳಿಯ ಬಾಬಾಬುಡನ್ ದರ್ಗಾ ಬೇರೆ, ಇದು ದಾಖಲೆಗಳ ಮೂಲಕ ಸಾಬೀತಾಗಿದೆ ಎಂದರು. ಹೈಕೋರ್ಟ್ ದತ್ತಪೀಠದಲ್ಲಿ ಹಿಂದೂಗಳ ಮೂಲಕ ಪೂಜೆ ನಡೆಯಬೇಕು ಎಂಬ ನಿರ್ದೇಶನದಂತೆ ಮುಸಲ್ಮಾನರು ನಾಗೇನಹಳ್ಳಿಯ ದರ್ಗಾ ಅಭಿವೃದ್ಧಿ ಮಾಡಬೇಕು ಎಂದರು.
ಹೈಕೋರ್ಟ್ ತೀರ್ಪಿನ ಹಾಗೆ ನಮ್ಮ ಸರ್ಕಾರ ಹಿಂದೂಗಳ ಭಾವನೆ ಪರ ನಿಲ್ಲತ್ತೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ದತ್ತಪೀಠಕ್ಕೆ ಬೇಟಿ ನೀಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ದತ್ತಪೀಠದ ಹೋರಾಟದ ಮೂಲಕ ಗುರುತಿಸಿಕೊಂಡಿದ್ದೇನೆ. ಹೈಕೋರ್ಟ್ ಹಿಂದೂಗಳ ಭಾವನೆಗಳ ಪರ ತೀರ್ಪು ನೀಡಿದ್ದು, ನಾನು ಮಂತ್ರಿಯಾದ ಸಂದರ್ಭದಲ್ಲಿ ಈ ತೀರ್ಪು ನೀಡಿರುವುದು ನನ್ನ ಜೀವನದ ಯೋಗ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ವಿರುದ್ಧದ ನಿರ್ಣಯ ತೆಗೆದುಕೊಂಡು, ಮುಜಾವರ್ ನೇಮಕ ಮಾಡಿತ್ತು, ಆ ಮೂಲಕ ಹಿಂದೂ ವಿರೋಧಿಯಾಗಿ ನಡೆದುಕೊಂಡಿತ್ತು. ಈಗ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಿದೆ ಎಂದರು.

























Discussion about this post