ಕೊಟ್ಟಿಗೆಹಾರ:ಬಾಳೂರು ಹೋಬಳಿಯ ದುರ್ಗದಹಳ್ಳಿಯಲ್ಲಿ ಶೌಚಾಲಯದಲ್ಲಿ ಅಡಗಿದ್ದ ಬೃಹತಾಕಾರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು.
ದುರ್ಗದಹಳ್ಳಿ ಗ್ರಾಮದ ಗ್ರಾಮಸ್ಥ ಹರೀಶ್ ಅವರ ಮನೆಯ ಶೌಚಾಲಯದಲ್ಲಿ ಅಡಗಿದ್ದ ೧೫ ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಭಯ ಪಟ್ಟ ಮನೆಯ ಮಾಲೀಕರು ಉರಗಪ್ರೇಮಿ ಬಣಕಲ್‌ನ ಸ್ನೇಕ್ ಆರೀಪ್ ಅವರನ್ನು ಕರೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಹರೀಶ್, ಗ್ರಾಮಸ್ಥರಾದ ಮಂಜುನಾಥ್‌ಗೌಡ, ದಿನೇಶ್ ಗೌಡ, ಶರತ್,ಸುಬ್ರಾಯಗೌಡ, ಗಿರೀಶ್, ಪ್ರವೀಣ್ ಮತ್ತಿತರರು ಇದ್ದರು.

























Discussion about this post