ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ರಾತ್ರಿ 8.3 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಇದು ಈ ಚಳಿಗಾಲದಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ.
ಶುಕ್ರವಾರ ಬೆಳಗ್ಗೆ ದಿನದ ಗರಿಷ್ಠ ತಾಪಮಾನ 23.7 ಡಿಗ್ರಿ ಸೆಲ್ಶಿಯಸ್ ಇತ್ತು. ವಾರದಿಂದೀಚೆಗೆ ರಾತ್ರಿ ವೇಳೆಗೆ ಕನಿಷ್ಠ ತಾಪಮಾನ ಸರಾಸರಿ 9 ಡಿಗ್ರಿ ಸೆಲ್ಶಿಯಸ್ಗೆ ತಗ್ಗಿತ್ತು. ಶುಕ್ರವಾರ ರಾತ್ರಿ ಇನ್ನಷ್ಟ ಇಳಿಕೆಯಾಗಿ ಕನಿಷ್ಠ ಉಷ್ಣಾಂಶ 8.4 ಡಿಗ್ರಿ ಸೆಲ್ಶಿಯಸ್ಗೆ ತಗ್ಗಿತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಶ್ರೀನಗರದಲ್ಲಿ ಮೈನಸ್ 2.4 ಡಿಗ್ರಿ ಸೆಲ್ಶಿಯಸ್: ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಎಂಟು ದಿನಗಳ ಹಿಂದೆ ತಾಪಮಾನ ಮೈನಸ್ 2.4 ಡಿಗ್ರಿ ಸೆಲ್ಶಿಯಸ್ಗೆ ಇಳಿದಿತ್ತು. ಇದು ಈ ಚಳಿಗಾಲದ ಋತುವಿನಲ್ಲಿ ಕಣಿವೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಆಗಿತ್ತು. ಈ ಮಧ್ಯೆ, ಕೇಂದ್ರಾಡಳಿತ ಪ್ರದೇಶದಲ್ಲಿ ಹಿಮಸುರಿಯುವಿಕೆ ಕೂಡ ಹೆಚ್ಚಳ ಆಗಿದ್ದು, ಗಿರಿಕಂದರ ಭಾಗದಲ್ಲಿ ರಸ್ತೆಗಳು ಹಿಮದಿಂದ ಮುಚ್ಚಿವೆ.
ಸುಧಾರಿಸಿದ ವಾಯು ಮಾಲಿನ್ಯ: ದೀಪಾವಳಿ ಸಮಯದಲ್ಲಿ ತೀವ್ರ ಮಟ್ಟದಲ್ಲಿ ಹದಗೆಟ್ಟಿದ್ದ ವಾಯು ಮಾಲಿನ್ಯದ ಪ್ರಮಾಣ ಈಗ ತುಸು ಸುಧಾರಿಸಿದ್ದು, ಈಗ “ತೀರ ಕಳಪೆ” ಹಂತದಲ್ಲಿ ಇದೆ. ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ಗಳಲ್ಲಿ ಎಕ್ಯೂಐ ಮಟ್ಟ “ಕಳಪೆ” ಮಟ್ಟದಲ್ಲಿ ಇದೆ. ನವದೆಹಲಿಯಲ್ಲಿ ಶನಿವಾರ ಬೆಳಿಗ್ಗೆ 302 ಇತ್ತು ಶುಕ್ರವಾರ ಇದು 314 ಎಕ್ಯೂಐ ದಾಖಲಾಗಿತ್ತು.
At 8.3 Degrees, Delhi Records Coldest Night This Winter
ಇದನ್ನು ಓದಿ: ಚಳಿಗಾಲಕ್ಕೆ ಒಳ್ಳೆಯದು ಈ ಐದು ತರಕಾರಿ, ಹಣ್ಣು, ಸೊಪ್ಪು
ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚು; ವಹಿಸಬೇಕಿದೆ ಎಚ್ಚರಿಕೆ
Discussion about this post