ಕನ್ನಡನಾಡಿ ಸುದ್ದಿ ಜಾಲ: ನೆಹರೂ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಅವರ ಪಕ್ಷದವರಲ್ಲೇ ಅಸಮಾಧಾನವಿರುವುದು ಮತ್ತೊಮ್ಮೆ ಗೊತ್ತಾಗಿದ್ದು, ಎಂಪಿ ಕುಮಾರಸ್ವಾಮಿ ಒಪನ್ ಟಾಕ್ ಮಾಡಿದ್ದಾರೆ.
ದೇಶ ಕಟ್ಟಿದ ಯಾವುದೇ ನಾಯಕರ ವಿರುದ್ಧ ಮಾತನಾಡಕೂಡದು. ದೇಶದ ನಾಯಕರುಗಳ ವಿಚಾರ ಬಂದಾಗ ಪಕ್ಷ, ಜಾತಿ, ಧರ್ಮದ ಭೇದವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ ಬೆನ್ನಲ್ಲೇ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ನೆಹರೂ ಬಗೆಗೆ ವಾಜಪೇಯಿಯಂಥ ನಾಯಕರು ಪರಸ್ಪರ ಗೌರವ ಇಟ್ಟುಕೊಂಡಿದ್ದರು ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ವಾಜಪೇಯಿ ಮಾತನಾಡುತ್ತಿದ್ದರೆ, ಅವರು ಇನ್ನೂ ಮಾತನಾಡುವುದಕ್ಕೆ ಅವಕಾಶ ಕೊಡುವಂತೆ ಆಗ ಪ್ರಧಾನಿಯಾಗಿದ್ದ ನೆಹರೂ ಸ್ಪೀಕರ್ ಅವರಲ್ಲಿ ವಿನಂತಿಸುತ್ತಿದ್ದರು. ಹಾಗೆಯೇ, ನೆಹರೂ ಅವರ ಬಗ್ಗೆಯೂ ವಾಜಪೇಯಿ ಅಂಥದೇ ಗೌರವ ತಳೆದಿದ್ದರು. ವಾಜಪೇಯಿ ಅರ್ಥಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಕಚೇರಿಯಲ್ಲಿನ ನೆಹರೂ ಬಾವಚಿತ್ರವನ್ನು ಸಿಬ್ಬಂದಿ ತೆಗೆದರೆಂಬುದು ಗಮನಕ್ಕೆ ಬಂದಾಗ, ನೆಹರೂ ಭಾವಚಿತ್ರವನ್ನು ಪುನಃ ಇರಿಸುವಂತೆ ಆದೇಶಿಸಿದ್ದರು ವಾಜಪೇಯಿ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಇಂದು ವೈಯಕ್ತಿಕ ದ್ವೇಷ ರಾಜಕಾರಣವನ್ನು ಆವರಿಸಿಕೊಂಡಿದೆ ಎಂದವರು ಸ್ಥಳೀಯವಾಗಿ ಸುದ್ದಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ನೇರ ಮಾತಿನಲ್ಲಿ ಹೇಳಿದ್ದಾರೆ.

























Discussion about this post