ಚಿಕ್ಕಮಗಳೂರು: ಪಡಿತರ ಅಕ್ಕಿ ಕಡಿತಗೊಳಿಸುವುದಾಗಲಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದಾಗಲಿ ಮಾಡಿದಲ್ಲಿ ಸಾರ್ವಜನಿಕರ ಪರವಾಗಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬೆನ್ ಮೊಸಸ್ ತಿಳಿಸಿದ್ದಾರೆ.
ಆಹಾರ ಸಚಿವರು ಮನುಷ್ಯನಿಗೆ ಜೀವನ ನಡೆಸಲು ೫ ಕೆಜಿ ಅಕ್ಕಿ ಸಾಕು ಎಂಬ ಹೇಳಿಕೆ ನೀಡಿರುವುದು ಅವರಿಗೆ ಸರಿಯಿದೆ ವಯಸ್ಸಾಗಿರುವುದರಿಂದ ಅವರಿಗೆ ೫ ಕೆಜಿ ಸಾಕು ಆದರೆ ಸಾಮಾನ್ಯ ಜನರಿಗೆ ಸಾಕಾಗುವುದಿಲ್ಲ ಇವರ ಈ ಹೇಳಿಕೆಯಿಂದ ಮುಂದೆ ಪಡಿತರ ಅಕ್ಕಿ ಕಡಿತಗೊಳಿಸುವ ಮುನ್ಸೂಚನೆ ನೀಡಿದ್ದಾರೆ.
ಆರಗ ಜ್ಞಾನೇಂದ್ರ ಎಂದರೆ ಒಳ್ಳೆಯ ಜ್ಞಾನವಂತರು ಎಂದು ತಿಳಿದಿದ್ದೆವು, ಸರ್ಕಾರದ ಮುಖ್ಯ ಸಚಿವ ಸ್ಥಾನದಲ್ಲಿರುವ ಇವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಹಾಗೂ ಮೈಸೂರಿನಲ್ಲಿ ಆದ ಅತ್ಯಾಚಾರದ ಪ್ರಕರಣದ ವಿಷಯದಲ್ಲಿ ಸಚಿವರುಗಳು, ಲೋಕಸಭೆ ಸದಸ್ಯರು ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಶಶಿಕಲಾ ಜೊಲ್ಲೆ ಇಂತಹ ಕೃತ್ಯಗಳು ಎಲ್ಲಾ ಸರ್ಕಾರದಲ್ಲೂ ಆಗಿದೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ನೋಡಿದರೆ ಅತ್ಯಾಚಾರ ಮಾಡಿರುವ ಗ್ಯಾಂಗ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದಂತಿದೆ.
ಲೋಕಸಭೆ ಸದಸ್ಯ ಸಿದ್ದೇಶ್ವರ್ ಅತ್ಯಾಚಾರ ನಡೆದಿರುವುದು ನನಗೆ ಗೊತ್ತಿಲ್ಲ, ನಾನು ಪತ್ರಿಕೆ ಓದಿಲ್ಲ ಎಂಬ ಉಡಾಫೆ ಉತ್ತರ ನೀಡಿದ್ದಾರೆ ಇದರಿಂದ ಹೆಣ್ಣು ಮಕ್ಕಳ ಮೇಲೆ ಇವರಿಗಿರುವ ಕಾಳಜಿ ಎದ್ದು ಕಾಣುತ್ತದೆ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಡಿ ದೇಶದಲ್ಲಿ ಅತ್ಯಾಚಾರ ಕೇಸುಗಳು ಹೆಚ್ಚಾಗುತ್ತಿವೆ ಈ ಸರ್ಕಾರದಿಂದ ಮಹಿಳೆಯರಿಗಷ್ಟೆ ಅಲ್ಲದೆ ಸಣ್ಣ ಬಾಲಕಿಯರಿಗೂ ರಕ್ಷಣೆ ಇಲ್ಲದಂತಾಗಿದೆ. ಅತ್ಯಾಚಾರ ಮಾಡುವ ಕಟುಕರಿಗೆ ಕ್ರೂರ ಶಿಕ್ಷೆ ನೀಡುವ ಕಾನೂನು ಜಾರಿಮಾಡಬೇಕೆಂದು ಆಗ್ರಹಿಸಿದ್ದಾರೆ.

























Discussion about this post