ಅಫ್ಘಾನಿಸ್ತಾನದಲ್ಲಿ ಮತಾಂಧ ತಾಲಿಬಾನ್ ಗಳ ಅಟ್ಟಹಾಸಕ್ಕೆ ಜಗತ್ತು ದಿಗ್ಭ್ರಮೆ ಹುಟ್ಟಿಸಿದೆ. ಕಾಬೂಲ್ ನಿಂದ ದಂಡಿಗಟ್ಟಲೆ ಜನ ದೇಶ ಬಿಡಲು ಓಡಿಹೋಗುತ್ತಿರುವ ಬೆನ್ನಲ್ಲೇ ಶಿಶುವೊಂದು ಸೈನಿಕರ ಕೈಯಲ್ಲಿ ಸಿಕ್ಕಿತ್ತು. ಆ ಮಗುವನ್ನು ಸೈನಿಕರೊಬ್ಬರು ಎತ್ತಿಕೊಳ್ಳುತ್ತಾರೆ.
ಮಗುವಿನ ಬಗ್ಗೆ ಕಳವಳಗೊಂಡು ನೋಡುತ್ತಿರುವಂತೆ ಮಗುವನ್ನು ಸೈನಿಕರು ಒಬ್ಬೊಬ್ಬರಾಗಿ ಕೈಯಿಂದ ಕೈಗೆ ಪಾಸ್ ಮಾಡುತ್ತಾ ಸುರಕ್ಷಿತ ಸ್ಥಳಕ್ಕೆ ಸೇರಿಸುವ ವಿಡಿಯೋ ದೃಶ್ಯ ಎಂಥವರ ಮನಸ್ಸನ್ನೂ ಕರಗಿಸುತ್ತದೆ. ಮುಳ್ಳುಕಂಠಿಗಳ ನಡುವೆ ಸಿಕ್ಕಿದ್ದ ಮಗುವನ್ನು ರಕ್ಷಿಸಿ ಮಗುವನ್ನು ತಂದೆಗೆ ನೀಡುವ ದೃಶ್ಯ ನಮಗೆ ಆಶಾವಾದಕವಾಗಿ ಕಂಡುಬರುತ್ತದೆ.
ಹೀಗೆ ಮಗು ಸೈನಿಕರಿಗೆ ಸಿಕ್ಕಿದ್ದು ಹಮಿದ್ ಕರ್ಜೈ ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ. ಅಮೇರಿಕಾ ಸೈನಿಕರು ರಕ್ಷಣಾ ಕಾರ್ಯ ಮಾಡಿದ್ದರು. ಈಗ ಮಗು ಆರೋಗ್ಯವಾಗಿಲ್ಲ ಎಂದು ಎಂದು ಮಗುವಿನ ತಂದೆ-ತಾಯಿ ಕೂಗಿದ ಕಾರಣ ಮಗುವನ್ನು ಏರ್ ಪೋರ್ಟ್ ನಲ್ಲಿರುವ ನೋರ್ವೆಗಿಯನ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಯುಎಸ್ ರಕ್ಷಣಾ ಇಲಾಖೆ ವಕ್ತಾರ ಜಾನ್ ಕಿರ್ಬೈ ಮಾಹಿತಿ ನೀಡಿದ್ದಾರೆ
Discussion about this post