ಚಿಕ್ಕಮಗಳೂರು: ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ವಿಚಾರಧಾರೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಬಿಎಸ್‌ಪಿ ಜಿಲ್ಲಾದ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು
ನಗರದ ಬಿಎಸ್‌ಪಿ ಕಚೇರಿಯಲ್ಲಿ ನಡೆದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ೧೪೨ ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಅಸ್ಪೃಶ್ಯತೆ, ಅಸಮಾನತೆ, ಜಾತಿ ಪದ್ಧತಿತಾರತಮ್ಯ ಸೇರಿದಂತೆ ಸಮಾಜದಲ್ಲಿದ್ದ ಪಿಡುಗುಗಳು ದೌರ್ಜನ್ಯ. ಶೋಷಣೆಗಳ ವಿರುದ್ಧ ಹೋರಾಟ ನಡೆಸಿದ ಮಹಾತ್ಮರು ಎಂದರು.
ಅಂತಹ ಮಾನವತಾವಾದಿಯ ವಿಚಾರಧಾರೆ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಸಮಾಜದಲ್ಲಿರುವ ಅಸ್ಪೃಶ್ಯತೆ. ಅಸಮಾನತೆ. ದೌರ್ಜನ್ಯ ಶೋಷಣೆಗಳು ನಿಲ್ಲುತ್ತವೆ ಎಂದು ತಿಳಿಸಿದರು
ಸಹೋದರತ್ವ ಸಮಿತಿಯ ಜಿಲ್ಲಾಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ, ಸಮಾಜ ಸುಧಾರಕ ಪೆರಿಯಾರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯಗಳು ಎಂದರು. ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ, ತಾಲೂಕು ಅಧ್ಯಕ್ಷ ಹರೀಶ್ ಮಾತನಾಡಿದರು.
ಉಪನ್ಯಾಸಕ ಎ.ಪಿ.ಸುರೇಶ್, ಸಂದೀಪ್, ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ, ನವೀನ್, ಹುಣಸೆಮಕ್ಕಿ ಲಕ್ಮಣ್, ಕೆ.ಎಸ್.ಮಂಜುಳ, ರವಿಕುಮಾರ್ ಇದ್ದರು.

























Discussion about this post