ಕಳಸ: ಮೋದಿ ಭಾವಚಿತ್ರವಿರುವ ರಸ್ತೆ ಬದಿಯ ಬೃಹತ್ ಫಲಕಕ್ಕೆ ಸಗಣಿ ಮತ್ತು ಮಸಿ ಬಳಿದಿರುವ ಘಟನೆ ಜರುಗಿದೆ.
ಸಂಸೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಸ್. ಕೆ ಮೇಗಲ್ ರಸ್ತೆಯ ಬಸ್ತೆಗದ್ದೆಯ ಹತ್ತಿರ ಭಾರತ ಸರ್ಕಾರದ ಧೀನ ದಯಾಳ್ ಗ್ರಾಮ ಜ್ಯೋತಿ ಯೋಜನೆಯನ್ನು ಬಿಂಭಿಸುವ ಬೃಹತ್ ಜಾಹಿರಾತು ಫಲಕದ ಮೇಲೆ ಈ ರೀತಿ ಮಾಡಿ ಅವಮಾನ ಮಾಡಲಾಗಿದೆ.
ಈ ಕುರಿತು ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಬಂಧಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಕೆ. ಮಹೇಶ್ ತಿಳಿಸಿದ್ದಾರೆ.

























Discussion about this post