ಗೋವಾ: ಟೂರಿಸಂ ಅನ್ನೇ ಜೀವಾಳವಾಗಿ ನಂಬಿರುವ ರಾಜ್ಯ ಎಂದರೆ ಗೋವಾ. ಈಗ ಕರೋನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೇಲೆಯಲ್ಲಿ ಸರ್ಕಾರ ಟೂರಿಸಂ ಕ್ಷೇತ್ರದ ಚಟುವಟಿಕೆಗಳನ್ನು ವನ್ನು ಪುನಃ ತೆರೆಯಲು ಸರ್ಕಾರ ಶಿಫಾರಸ್ಸು ಮಾಡಿದೆ.
ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ರಾಜ್ಯಕಾರ್ಯಪಡೆಯು ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳನ್ನು ತೆರೆದಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮುಕ್ತವಾಗಿ ಆಹ್ವಾನಿಸುತ್ತಿದೆ. ಕ್ಯಾಸಿನೋ, ನೈಟ್ ಕ್ಲಬ್ ಗಳ ಜತೆಗೆ ಸ್ಪಾ ಸೇರಿದಂತೆ ಗೋವಾದ ಪ್ರವಾಸೋಧ್ಯಮ ಸ್ಥಳಗಳಲ್ಲಿ ಶೇ. ೫೦ರಷ್ಟು ಸಾಮರ್ಥ್ಯದೊಂದಿಗೆ ಆರಂಭಗೊಂಡಿವೆ.
ಆದರೆ ಎಲ್ಲಾ ಸಿಬ್ಬಂಧಿ ವ್ಯಾಕ್ಸಿನ್ ಹಾಕಿಸಿರಬೇಕು, ನೆಗೆಟಿವ್ ರಿಪೋರ್ಟ್ ತೋರಿಸಬೇಕು ಎಂದು ಸಹ ಹೇಳಲಾಗಿದೆ. ಈ ಕುರಿತು ಗೋವಾ ಸಿಎಂ. ಪ್ರವೀದ್ ಸಾವಂತ್ ಗೋವಾದ ಕ್ಯಾಸಿನೋಗಳು ಸೋಮವಾರದಿಂದ ಮತ್ತೆ ಪ್ರವಾಸಿಗರಿಗೆ ತೆರೆದುಕೊಳ್ಳಲಿವೆ. ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಅಥವಾ ಆರ್ ಟಿ ಪಿ ಸಿ ಆರ್ ವರದಿಯನ್ನು ಹೊಂದಿರುವ ಜನರಿಗೆ ಈ ಕ್ಯಾಸಿನೋಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ತಜ್ಞರ ಸಮಿತಿಯು ಕಳೆದ ಎರಡು -ಮೂರು ವಾರಗಳಲ್ಲಿ ಪಾಸಿಟಿವಿಟಿ ದರ ಹೋಲಿಕೆ ನಡೆಸಿದ್ದು, ಇದು ೨ ಪ್ರತಿಶತಕ್ಕಿಂತ ಕಡಿಮೆ ಇದೆ ಎಂಬ ಹಿನ್ನೇಲೆಯಲ್ಲಿ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋಧ್ಯಮ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಕ್ಯಾಸಿನೋಗಳನ್ನು ಸೋವಮಾರ ಕಟ್ಟುನಿಟ್ಟಿನ SOP RULES ನೊಂದಿಗೆ ಪುನಃ ತೆರೆಯಲು ಅವಕಾಶ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

























Discussion about this post