ಚಿಕ್ಕಮಗಳೂರು: ಗೋಣಿಬೀಡಿನ ಚರ್ಚ್ ಧರ್ಮಗುರುಗಳಾದ ಫ್ರಾನ್ಸಿಸ್ ರಸ್ಕಿನಾ ಅವರನ್ನು ಚಿಕ್ಕಮಗಳೂರಿನ ವಿಜಯಪುರ ಚರ್ಚ್ ಗೆ ವರ್ಗಾವಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಚರ್ಚ್ ನ ಭಕ್ತರು ಸೇರಿ ಬೀಳ್ಗೊಡುಗೆ ಏರ್ಪಡಿಸಿದ್ದರು.
ಹೊಳೆನರಸೀಪುರದಿಂದ ಆಗಮಿಸಿದ್ದ ಇವರು ಶಿಥಿಲಾವಸ್ಥೆಯಲ್ಲಿದ್ದ ಚರ್ಚ್ ಪುನರ್ನಿರ್ಮಾಣ ಕಾರ್ಯ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರೈಸ್ತ ರ ಸ್ಮಶಾನದಲ್ಲಿ ಕಾಂಪೌಂಡ್ ನಿರ್ಮಸಿ ಪ್ರಾರ್ಥನೆ ಮಾಡಲು ಪುಟ್ಟ ದೇವಾಲಯ ನಿರ್ಮಿಸಿದ್ದರು. ಸರಳತೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಕ್ರೈಸ್ತ ಮಕ್ಕಳ ವಿದ್ಯಾಭ್ಯಾಸ ಕ್ಕೆ ಶ್ರಮಿಸಿದ್ದರು.

























Discussion about this post