ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ): ರಾಜ್ಯದ ರಾಜಕಾರಣದಲ್ಲಿ ನೂತನ ಮಂತ್ರಿಮಂಡಲದಲ್ಲಿ ಸ್ಥಾನ ಸಿಗದ ಹಲವಾರು ಬಿಜೆಪಿ ನಾಯಕರು ತಂಡ ಕಟ್ಟಿಕೊಂಡ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಬಿಜೆಪಿ ಪಕ್ಷದ ರಾಮದಾಸ್, ಎಂಟಿಬಿ, ಶ್ರೀರಾಮುಲು ಅವರಲ್ಲೂ ಅತೃಪ್ತಿ ವ್ಯಕ್ತವಾಗಿದ್ದ ಬೆನ್ನಲ್ಲೇ ಸೈಲೆಂಟ್ ಆಗಿದ್ದ ರಮೇಶ್ ಜಾರಕಿಹೊಳಿಯವರು ಜಾಗೃತರಾಗಿದ್ದಾರೆ. ಈ ಮೊದಲು ಮಾಜಿ ಸಿ.ಎಂ. ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿದ್ದು ಈಗ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಡಿ ಪ್ರಕರಣದಿಂದಾಗಿಯೇ ಖಾತೆ ನೀಡಲಾಗಿಲ್ಲ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲದಿರುವುದರಿಂದ ಈಗ ದೆಹಲಿಯಲ್ಲಿರುವ ಬಿಜೆಪಿ ನಾಯಕರ ತಂಡ ವರಿಷ್ಠರ ಭೇಟಿ ಮಾಡಿದ ನಂತರ ತಮ್ಮ ಅಭಿಲಾಷೆಯನ್ನು ವಿವರಿಸಬಹುದು ಎಂದು ಅಂದಾಜು ಮಾಡಲಾಗಿದೆ
Discussion about this post