Kunigal News: ಮಹಿಳಾ ಪೋಲೀಸ್ ಪೇದೆಯನ್ನು ಮದುವೆಯಾಗುವುದಾಗಿ ನಂಬಿಸಿ, ದೇವರ ಫೋಟೋ ಮುಂದೆ ತಾಳಿ ಕಟ್ಟಿ, ದೈಹಿಕ ಸಂಪರ್ಕ ನಡೆಸಿ, ಬಳಿಕ ಆಕೆಯನ್ನು ಬಿಟ್ಟು ಇನ್ನೋರ್ವಳೋಂದಿಗೆ ಮದುವೆಗೆ ತಯಾರಾಗಿರುವ ಘಟನೆ ಕುಣಿಗಲ್ನಲ್ಲಿ ನಡೆದಿದೆ.
ಕ್ರೈಂಗಳಿಗೆ ಬ್ರೇಕ್ ಹಾಕಬೇಕಿರುವ ಪೋಲೀಸರಿಂದಲೇ ನಾಚಿಕೆಗೇಡಿನ ಕೆಲಸ
34 ವರ್ಷದ ಭಗವಂತರಾಯ್ ಬಿರಾದಾರ್ ಆರೋಪಿಯಾಗಿದ್ದು, ಈತ ಮತ್ತು ಮಹಿಳಾ ಪೇದೆ ಅಮೃತ್ತೂರು ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಾಗ ಇಬ್ಬರ ನಡುವೆ ಸ್ನೇಹವಾಗಿದ್ದು, ಕೆಲ ದಿನಗಳಲ್ಲೇ ಸ್ನೇಹ ಪ್ರೇಮಕ್ಕೆ ತಿರುಗಿದ್ದು, ಇಬ್ಬರ ನಡುವೆ ಸಲುಗೆ ಬೆಳೆದಿದೆ.
ಈ ನಡುವೆ ಮಹಿಳಾ ಪೇದೆ ಭಗವಂತರಾಯ್ನನ್ನು ಅತೀಯಾಗಿ ನಂಬಿದ್ದು, ಪೋಲೀಸ್ ಕ್ವಾಟರ್ಸ್ನಲ್ಲಿರುವ ಮನೆಯಲ್ಲಿಯೇ, ಫೆಬ್ರವರಿ 14, 2023ರಲ್ಲಿ ಸಾಯಿಬಾಬಾ ಫೋಟೋ ಮುಂದೆ ಭಗವಂತರಾಯ್ ಮಹಿಳಾ ಪೇದೆಗೆ ತಾಳಿ ಕಟ್ಟಿದ್ದಾನೆ. ಅಲ್ಲದೇ, ಮತ್ತೆ ಎಲ್ಲರೆದುರು ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇದಾದ ಬಳಿಕ ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಮಹಿಳಾ ಪೇದೆಗೆ ತಾಳಿ ಕಟ್ಟಿ, ಇನ್ನೋರ್ವಳ ಜತೆ ನಿಶ್ಚಿತಾರ್ಥ
ಬಳಿಕ ತಮ್ಮಿಬ್ಬರ ಸಂಬಂಧದ ವಿಚಾರ ಗೌಪ್ಯವಾಗಿರಬೇಕೆಂದು ಹೇಳಿದ್ದಾನೆ. ಜಾತಿ ಬೇರೆ ಬೇರೆಯಾಗಿದ್ದು, ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲವೆಂದು ಹೇಳಿದರೂ ಕೂಡ, ಭಗವಂತರಾಯ್ ಪ್ರೀತಿ ಮುಂದೆ ಜಾತಿ ಏನಿಲ್ಲ. ನಾವಿಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಜೀವನ ಚೆನ್ನಾಗಿರುತ್ತದೆ. ನಾನು ನಿನ್ನನ್ನು ಚೆನ್ನಾಗಿ ನೋಡಿಕೋಳ್ಳುತ್ತೇನೆ ಎಂದು ಹೇಳಿದ್ದಾನೆ.
ಇದನ್ನೆಲ್ಲ ನಂಬಿದ ಪೋಲೀಸ್ ಪೇದೆ, ಭಗವಂತರಾಯ್ ಜತೆ ದೈಹಿಕ ಸಂಪರ್ಕಕ್ಕೆ ಓಕೆ ಎಂದಿದ್ದಾಳೆ. ಆದರೆ ಇವರಿಬ್ಬರ ಸಂಬಂಧದ ಬಗ್ಗೆ ಯಾರಿಗೂ ಗೋತ್ತಿಲ್ಲದ ಕಾರಣ, ಭಗವಂತರಾಯ್ ಇಲ್ಲಿ ಮಹಿಳಾ ಪೇದೆ ಜತೆ ಸಂಬಂಧವಿರಿಸಿಕೊಂಡು. ಅತ್ತ ಇನ್ನೋರ್ವ ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡು, ಮದುವೆಗೆ ರೆಡಿಯಾಗಿದ್ದಾನೆ.
ಎಸ್ಪಿಗೆ ದೂರು ನೀಡಿದ್ರೆ ಮಾನ ಹರಾಜು ಹಾಕುವ ಬೆದರಿಕೆ
ಈ ವಿಷಯ ತಿಳಿದು ಮಹಿಳಾ ಪೋಲೀಸ್ ಪೇದೆ ತಾಳಿಯ ಜತೆ ಆಫೀಸಿಗೆ ಹೋದಾಗ, ತಾಳಿ ಯಾಕೆ ಹಾಕಿಕೊಂಡಿದ್ದೀಯ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಮಹಿಳಾ ಪೇದೆ, ನಾನು ಕಾನೂನಾತ್ಮಕವಾಗಿ ರಿಜಿಸ್ಟರ್ ಮ್ಯಾರೇಜ್ ಆಗೋಣವೆಂದಾಗ, ಇಬ್ಬರ ನಡುವೆ ಜಗಳವಾಗಿದೆ.
ಬಳಿಕ ತನ್ನ ಜತೆ ಸಂಪರ್ಕವಿರಿಸಿಕೋಂಡ ವಿಷಯ, ಇನ್ನೋರ್ವಳ ಜತೆ ನಿಶ್ಚಿತಾರ್ಥವಾದ ವಿಷಯ ಈ ಎಲ್ಲ ವಿಷಯವನ್ನು ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾಗಭೂಷಣ್ ಎಂಬುವರಿಗೆ ತಿಳಿಸಿದ್ದಾಳೆ. ಅವರು ಮದುವೆಯಾಗಿದ್ದಕ್ಕೆ ಸಾಕ್ಷಿ ಕೇಳಿದಾಗ, ನನ್ನ ಮೋಬೈಲ್ನಲ್ಲಿ ಎಲ್ಲ ಸಾಕ್ಷಿ ಇದೆ ಎಂದಾಗ, ಬಿರಾದಾರ್ ಮತ್ತೆ ಜಗಳವಾಡಿದ್ದಾನೆ. ಅಲ್ಲದೇ ಎಸ್ಪಿಗೆ ದೂರು ನೀಡಿದರೆ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಅಮೃತ್ತೂರು ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಒಟ್ಟಾರೆಯಾಗಿ ಸಮಾಜದಲ್ಲಾಗುವ ಕ್ರೈಂಗಳಿಗೆ ಬ್ರೇಕ್ ಹಾಕಬೇಕಿರುವ ಪೋಲೀಸರೇ ಈ ರೀತಿ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.
Discussion about this post