ನವದೆಹಲಿ: ಓಮಿಕ್ರಾನ್ ರೂಪಾಂತರಿ ಕಾಣಿಸಿಕೊಂಡ ಮೇಲೆ ಮೂರನೇ ಡೋಸ್ ಲಸಿಕೆಗೆ ಅನುಮತಿ ನೀಡಿಬೇಕೆಂಬ ಒತ್ತಾಯ ವ್ಯಾಪಕವಾಗಿದೆ ಬ್ರಿಟನ್ನಲ್ಲಿ ಈಗಾಗಲೇ ಮೂರನೇ ಡೋಸ್ ಲಸಿಕೆಗೆ ಅನುಮತಿ ನೀಡಲಾಗಿದೆ. ಹಲವು ದೇಶಗಳಲ್ಲಿ ಈ ವಿಷಯ ಪರಿಶೀಲನೆಯಲ್ಲಿ ಇದೆ. ಆದರೆ, ಈ ಬೂಸ್ಟರ್ ಡೋಸ್ ಮೊದಲೆರಡು ಡೋಸ್ನಲ್ಲಿ ಪಡೆದ ಲಸಿಕೆಗಿಂತ ಬೇರೆಯದ್ದಾಗಿದ್ದರೆ ಉತ್ತಮ ಎಂದು ಭಾರತದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೂಸ್ಟರ್ ಡೋಸ್ ಕುರಿತಂತೆ ತಜ್ಞರಲ್ಲಿ ಇರುವ ಅಭಿಪ್ರಾಯ ಏನು ಎಂಬ ಬಗ್ಗೆ ನಡೆದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರು ಮೂರನೇ ಡೋಸ್ನಲ್ಲಿ ಇದೇ ಲಸಿಕೆ ಪಡೆಯುವುದರ ಬದಲು ಬೇರೆ ಕಂಪನಿಯ ಲಸಿಕೆ ಪಡೆಯುವುದು ಉತ್ತಮ. ಇದರಿಂದ ದೇಹದಲ್ಲಿ ಪ್ರತಿಕಾಯದ ಶಕ್ತಿ ಹೆಚ್ಚು ವೃದ್ಧಿಸುತ್ತದೆ ಮತ್ತು ಹೊಸ ತಳಿಯ ಸೋಂಕನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂಬುದು ತಜ್ಞರ ಅಭಿಮತ ಆಗಿದೆ.
ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ಬೂಸ್ಟರ್ ಡೋಸ್ ನೀಡುವ ಕುರಿತಂತೆ ಇನ್ನೂ ಪರಿಶೀಲನೆ ನಡೆಸುತ್ತಿದೆ. ಇದರಲ್ಲಿನ ಸದಸ್ಯರು ಕೂಡ ಮೂರನೇ ಡೋಸ್ ಲಸಿಕೆಯು ಮೊದಲೆರಡು ಡೋಸ್ಗಿಂತ ಭಿನ್ನವಾಗಿದ್ದರೆ ಹೆಚ್ಚು ಪರಿಣಾಮಕಾರಿ ಎನ್ನುವ ಅಭಿಪ್ರಾಯ ನೀಡಿದ್ದಾರೆ.
ಭಾರತದಲ್ಲಿ ಸದ್ಯ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗದ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್, ಬ್ರಿಟನ್ ಆಕ್ಸ್ಫರ್ಡ್-ಅಸ್ಟ್ರಾಜೆನಿಕಾ ಕಂಪನಿಯ ಸಹಯೋಗದಲ್ಲಿ ಪುಣೆಯ ಸೆರಖ ಸಂಸ್ಥೆ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಮತ್ತು ರಷ್ಯಾ ಅಭಿವೃದ್ಧ ಪಡಿಸಿರುವ ಸ್ಪುಟ್ನಿಕ್-ವಿ ಲಸಿಕೆಗಳನ್ನು ನೀಡಲಾಗುತ್ತಿದೆ.
Covid-19 Booster Must Be Different Vaccine: Top Expert Body
ಇದನ್ನು ಓದಿ: ಎರಡು ಡೋಸ್ ಕೊರೋನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ
ಇದನ್ನೂ ಓದಿ: ಹೆಚ್ಚುವರಿ ಲಸಿಕೆ ಶೇಖರಿಸ ಬೇಡಿ: ಶ್ರೀಮಂತ ದೇಶಗಳಿಗೆ ಡಬ್ಲ್ಯುಎಚ್ಒ ಒತ್ತಾಯ
Discussion about this post