ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ರೈತರೊಬ್ಬರು ಬೆಂಬಲ ಬೆಲೆ ಸಿಗದ ಕಾರಣ ತಾವೇ ಬೆಳೆದ ಈರುಳ್ಳಿ ಬೆಳೆಯನ್ನು ಟ್ರಾಕ್ಟರ್ ಚಲಾಯಿಸಿ ನಾಶ ಮಾಡಿದ ಘಟನೆ ನಡೆದಿದೆ.
ಅಜ್ಜಂಪುರ ತಾಲೂಕಿನ ಗೊಂಡದಹಳ್ಳಿಯ ರೈತ ದೇವರಾಜ್ ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ಸಿಗದ ಕಾರಣ, ಕಷ್ಟ ಪಟ್ಟು ಎರಡು ಎಕರೆ ಜಾಗದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಟ್ರಾಕ್ಟರ್ ಚಲಾಯಿಸಿ ತಮ್ಮ ಕೈಯ್ಯಾರೆ ಸಂಪೂರ್ಣ ನಾಶ ಮಾಡಿದ್ದಾರೆ.
ಈರುಳ್ಳಿ ಬೆಳೆಯಲು ಖರ್ಚು ಮಾಡಿದ ಹಣ ಸಹ ಫಸಲಿನಿಂದ ವಾಪಾಸ್ಸು ಕೈಗೆ ದೊರಕುತ್ತಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸರ್ಕಾರ ಈ ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಅವರು ಆಗ್ರಹಿಸಿದರು.

























Discussion about this post