ಚಿಕ್ಕಮಗಳೂರು : ಬೀರೂರು ಸಮೀಪದ ಮುಸಲಾಪುರ ಗ್ರಾಮದ ಬಳಿ ತೆರೆಯಲಾಗಿರುವ ಮದ್ಯಗಂಗಡಿಯನ್ನು ಕೂಡಲೇ ಬಂದ್ ಮಾಡಬೇಕು ಜತೆಗೆ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಎಮ್ಮೆದೊಡ್ಡಿ ಗ್ರಾಮದ ಹತ್ತಾರು ಮಹಿಳೆಯರು, ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ನಗರದ ಆಜಾದ್ ಪಾರ್ಕ್ ವೃತ್ತದ ಎದುರು ಪ್ರತಿಭಟನೆ ನಡೆಸಿದರು.
‘ಏನೇ ಆದರೂ ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ, ಕೂಡಲೇ ಪರವಾನಗಿ ಜತೆಗೆ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಗ್ರಾಮದ ಮಹಿಳೆಯರು ಪಟ್ಟು ಹಿಡಿದು ಕುಳಿತು ಧರಣಿ ನಡೆಸಿದರು.
ಈ ಸಂಬAಧ ವಕೀಲ ಲೋಕೇಶ್ ಮಾತನಾಡಿ ಈ ಗ್ರಾಮವೂ ಪ್ರವಾಸಿ ತಾಣದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವುದಿಲ್ಲ ಆದರೂ ಇಲ್ಲಿನ ಪಂಚಾಯಿತಿಯಲ್ಲಿ ರಸಗೊಬ್ಬರ ಮಾರಾಟ ಮಳಿಗೆ, ಪ್ರಾವಿಜನ್ ಸ್ಟೋರ್, ಹೆಸರಿನಲ್ಲಿ ಪರವಾಗಿ ಪಡೆದು ಇದೀಗ ಅನಧೀಕೃತವಾಗಿ ಮದ್ಯದಂಗಡಿ ಜತೆ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲಾಗಿದೆ ಇದು ಹಲವು ಅನೈತಿಕ ಚಟುವಟಿಕೆಗಳಿಗೆ ಎಡೆಮಾಡಿಕೊಡಲಿದೆ ಕೂಡಲೇ ಜಿಲ್ಲಾಡಳಿತ ಕ್ರಮವಹಿಸಿ ಪರವಾನಗಿ ರದ್ದುಗೊಳಿಸಿ ಬಾರ್ ಬಂದ್ ಮಾಡುವಂತೆ ಆಗ್ರಹಿಸಿದರು.
ಗ್ರಾಮದ ಕೆಲವೊಂದು ಪ್ರಭಾವಿಗಳು ಪಂಚಾಯಿತಿಯಿAದ ನಕಲಿ ಪರವಾನಗಿ ಪಡೆದು ಚಿಲ್ಲರೆ ಮಾರಾಟಕ್ಕೆ ಬೇರೆ ಕಡೆ ನೀಡಿರುವ ಪರವಾನಗಿ ಸಂಖ್ಯೆಯನ್ನೇ ಇಲ್ಲಿ ಹೋಟೆಲ್ ಮತ್ತು ಲಾಡ್ಜ್ ನಡೆಸಲು ಅನುಮತಿ ಕೊಟ್ಟಿದ್ದಾರೆ ಎಂದು ದೂರಿದರು.
ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರುಗಳು ವಾಸವಿದ್ದು, ಮಹಿಳೆಯರು ವಿದ್ಯಾರ್ಥಿಗಳು ಈ ಭಾಗದಲ್ಲಿ ಸಂಚಾರ ಮಾಡುವುದು ದುರ್ಗಮವಾಗಲಿದೆ ಮದ್ಯದಂಗಡಿ ಬದಲಾಗಿ ಯಾವುದಾದರು ಉಪಯುಕ್ತವಾಗುವ ಹೋಟೆಲ್, ಅಥವಾ ಪ್ರಾವಿಜನ್ ಸ್ಟೋರ್ ತೆರೆಯಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಗ್ರಾಮಪಂಚಾಯಿತಿ ಸದಸ್ಯ ರವಿ ಮಾತನಾಡಿ ಎಮ್ಮೆದೊಡ್ಡಿ ಪಂಚಾಯಿತಿಯಲ್ಲಿ ಮದ್ಯದಂಗಡಿ ತೆರೆಯಲು ಯಾವುದೇ ಅನುಮತಿ ನೀಡಿಲ್ಲ, ಯಾವುದೇ ಸದಸ್ಯರು ಸಭೆಯ ಗಮನಕ್ಕೂ ತಾರದೆ ನಕಲಿ ಪರವಾನಗಿ ಪಡೆದಿದ್ದಾರೆ ಎಂಬ ಅನುಮಾನ ಮೂಡಿದೆ ಎಂದು ಹೇಳಿದರು.
ಗ್ರಾಮದಲ್ಲಿ ಮದ್ಯದಂಗಡಿ ಆರಂಭವಾದಲ್ಲಿ ಇಲ್ಲಿನ ಬಹುತೇಕ ಕೂಲಿ ಕಾರ್ಮಿಕರು ಕುಡಿತಕ್ಕೆ ಒಳಗಾಗಿ ಕುಟುಂಬದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕ ಹಿತಾಸಕ್ತಿಯಿಂದ ಮದ್ಯದಂಗಡಿ ಪರವಾನಗಿ ರದ್ದು ಮಾಡಿ ಒಳಿತು ಮಾಡುವಂತೆ ವಿನಂತಿಸಿಕೊAಡರು.
ಗ್ರಾಮಸ್ಥರಾದ ಸವಿತಾಭಾಯಿ ಮಾತನಾಡಿ ಅನಧೀಕೃತವಾಗಿ ಮದ್ಯದಂಗಡಿ ಜತೆಗೆ ರೆಸ್ಟೋರೆಂಟ್ ಕೂಡ ನಿರ್ಮಾಣವಾಗಿತ್ತಿದ್ದು ಇದರಿಂದಾಗಿ ಅನೈತಿಕ ಚಟುವಟಿಕೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಪಂಚಾಯಿತಿಯಲ್ಲಿ ಅನ್ಯ ಉದ್ದೇಶಕ್ಕೆ ಪರವಾನಗಿ ಪಡೆದು ಇದೀಗ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆ ಮಾಡಿರುವುದು ಖಂಡನೀಯ ಯಾವುದೇ ಕಾರಣಕ್ಕೂ ಇದರ ಆರಂಭಕ್ಕೆ ಆಸ್ಪದ ಕೊಡುವುದಿಲ್ಲ ಎಂದು ಪಟ್ಟುಹಿಡಿದು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ತಾ.ಪಂ ಮಾಜಿ ಸದಸ್ಯ ಹೊಗರೇಹಳ್ಳಿ ಶಶಿಕುಮಾರ್, ಯೋಗೇಶ, ಗ್ರಾ.ಪಂ ಮಾಜಿ ಸದಸ್ಯ ಶಾಂತಕುಮಾರ್, ರಮೇಶ್‌ನಾಯ್ಕ್, ಲಕ್ಕಮ್ಮ, ಜಯಣ್ಣ, ಅನುಸೂಯಭಾಯಿ ಸೇರಿದಂತೆ ಮತ್ತಿತರರು ಇದ್ದರು.

























Discussion about this post