ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾವ್ನಲ್ಲಿ ಕೋತಿ ಮರಿಯನ್ನು ನಾಯಿಗಳು ಕೊಂದವೆಂದು ಆಕ್ರೋಶಕ್ಕೊಳಗಾಗಿರುವ ಕೋತಿಗಳ ಹಿಂಡು ಈವರೆಗೆ ಸುಮಾರು 250 ನಾಯಿಗಳನ್ನು ಸಾಯಿಸಿ ಸೇಡು ತೀರಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಒಂದು ತಿಂಗಳಿಂದ ಮಂಗಗಳು ಊರಿಗೆ ನುಗ್ಗಿ ನಾಯಿಮರಿಗಳನ್ನು ಎತ್ತಿಕೊಂಡು ಹೋಗುತ್ತಿವೆ. ಅವುಗಳನ್ನು ಕಟ್ಟಡದ ಅಥವಾ ಮರಗಳ ಮೇಲಕ್ಕೆ ಎಳೆದುಕೊಂಡು ಹೋಗಿ ಕೆಳಗೆ ಬೀಳಿಸುತ್ತಿವೆ. ಸ್ಥಳೀಯರು ದೂರು ನೀಡಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಕೋತಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗದ್ದಾರೆ.
ಹದಿನೈದು ದಿನಗಳ ಹಿಂದೆ ಗ್ರಾಮದ ನಿವಾಸಿ ಸೀತಾರಾಂ ನೈಬಲ್ ಎಂಬುವರ ನಾಯಿಮರಿಯನ್ನು ಮಂಗವೊಂದು ಎಳೆದುಕೊಂಡು ಹೋಗುತ್ತಿತ್ತು. ನಾಯಿಮರಿ ಕಿರುಚುತ್ತಿದ್ದನ್ನು ಕೇಳಿ ನೈಬಲ್ , ಅದನ್ನು ಮಂಗನಿಂದ ಕಾಪಾಡಿದರು. ಕೋತಿಯ ಜತೆಯ ಹೋರಾಟದಲ್ಲಿ ಅವರು ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿಂಗಳ ಹಿಂದೆ ಕೆಲವು ನಾಯಿಗಳು ಒಂದು ಕೋತಿಮರಿಯನ್ನು ಸಾಯಿಸಿದ್ದವು. ಅದೇ ಕಾರಣದಿಂದ ಕೋತಿಗಳು ನಾಯಿ ಮತ್ತು ನಾಯಿಮರಿಗಳನ್ನು ಬೇಟೆಯಾಡುತ್ತಿವೆ. ಗ್ರಾಮದಲ್ಲಿ ಈಗ ನಾಯಿಗಳೇ ಇಲ್ಲದಂತಾಗಿದೆ., ಈಗ ಕೋತಿಗಳು ಶಾಲಾ ಮಕ್ಕಳ ಮೇಲೂ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ
ಇಂಥದ್ದೇ ಒಂದು ಪ್ರಕರಣ ಕರ್ನಾಟಕದ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ನಡೆದಿತ್ತು. ಮಂಗಳಗಳು ಪ್ರತೀಕಾರ ತೀರಿಸಿಕೊಳ್ಳಲು 22 ಕಿ.ಮೀ. ದೂರ ಪಯಣಿಸಿದ್ದವು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಮೂರು ತಾಸು ಹರಸಾಹಸ ಮಾಡಿ ಕೋತಿಗಳನ್ನು ಹಿಡಿದು ಬೇಲೂರು ಅರಣ್ಯದಲ್ಲಿ ಬಿಟ್ಟರು. ಆದರೆ, ಟ್ರಕ್ವೊಂದನ್ನು ಏರಿ ವಾರದ ನಂತರ ಮತ್ತೆ ಗ್ರಾಮದಲ್ಲಿ ಸುಳಿದಾಡಿದ್ದವು. ಮತ್ತೆ ಅವುಗಳನ್ನು ಹಿಡಿದು ಈ ಸಾರಿ ದಟ್ಟಾರಣ್ಯದಲ್ಲಿ ಬಿಡಲಾಗಿತ್ತು.
Enraged Monkeys Kill 250 Dogs To Take ‘Revenge’
ಇದನ್ನು ಓದಿ: ಕಾನ್ಪುರದ ಸರ್ಕಾರಿ ಕಚೇರಿಯಿಂದ ಕಡತ ಕದ್ದೋಡಿದ ಮೇಕೆ ಹಿಂದೆ ಬಿದ್ದ ನೌಕರ!
ಇದನ್ನೂ ಓದಿ: ಒಬ್ಬಂಟಿ ನಾಯಿಗೆ ಬೇಜಾರಾದರೆ ಏನು ಮಾಡುತ್ತೆ? ಫೋನ್ ಬಳಸಿ ಮಾಲೀಕರಿಗೆ ಕರೆ ಮಾಡುತ್ತೆ!
Discussion about this post