ಹಾಸನ: ಬರುವ ನವೆಂಬರ್ ತಿಂಗಳಿನಲ್ಲಿ ತಮ್ಮ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯಾಗಲಿದೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಅವರು ತಿಳಿಸಿದರು.
ಹಾಸನ ತಾಲೂಕಿನ ಉಡುವಾರೆ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ನನ್ನ ೬೦ ವರ್ಷಗಳ ರಾಜಕೀಯ ಸಾಧನೆ, ಸೋಲು-ಗೆಲುವು, ಏಳು-ಬೀಳು ಸೇರಿದಂತೆ ಎಲ್ಲಾ ವಿಷಯಗಳಿಗಿರುವ ಆತ್ಮಚರಿತ್ರೆ ಕೆಲಸ ಅಂತಿಮ ಹಂತಕ್ಕೆ ಬಂದಿದೆ ಎಂದು ಸಹ ಹೇಳಿದ್ದಾರೆ.
ಆರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಕೇವಲ ೫ ವರ್ಷ ಮಾತ್ರ ಅಧಿಕಾರ ಅನುಭವಿಸಿದ್ದೆ. ಒಂದೂವರೆ ವರ್ಷ ಮುಖ್ಯಮಂತ್ರಿ, ಎರಡು ವರ್ಷ ನೀರಾವರಿ ಸಚಿವ, ಹತ್ತೂವರೆ ತಿಂಗಳು ಪ್ರಧಾನಿ ಎಂದು ತಿಳಿಸಿದ್ದಾರೆ.
ಈ ಅವಧಿಯಲ್ಲಿ ನಡೆಸಿದ ಹೋರಾಟ, ಎಲ್ಲಾ ಸಮುದಾಯಗಳಿಗೆ ಏನೆಲ್ಲಾ ಮಾಡಿರುವೆ ಅನ್ನೋದನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಆತ್ಮಚರಿತ್ರೆಯಲ್ಲಿದ್ದು, ಆಸಕ್ತರು ಓದಬಹುದು ಎಂದು ತಿಳಿಸಿದ್ದಾರೆ.

























Discussion about this post