ಚಿಕ್ಕಮಗಳೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೋರ್ವ ತಾಯಿಯನ್ನೆ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ. ಗೌರಿ ಕಾಲುವೆಯ ವಾಸಿ ಮಾನಸಿಕ ಅಸ್ವಸ್ಥನಾಗಿದ್ದ ಯುವಕ ದುಶ್ಯಂತ್ (೨೮) ತಾಯಿ ಸುಧಾ (೪೮)ರವರನ್ನು ಮಚ್ಚಿನಿಂದ ತಲೆಯ ಭಾಗಕ್ಕೆ ಹೊಡೆದಿದ್ದು ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೋಲೆ ಆರೋಪಿ ಯುವಕ ದುಶ್ಯಂತ ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಕಾರಣ ತಾಯಿ ಸುಧಾ ದೇವಾಸ್ಥಾನಗಳಿಗೆ ಪೂಜೆ , ಹರಿಕೆ ಮಾಡಿಕೊಳುತ್ತಿದ್ದರೂ. ಇಂದು ಬೆಳಿಗ್ಗೆಯೂ ಸಹ ಸ್ಥಳೀಯ ದೇವಾಲಯಒಂದಕ್ಕೆ ತೆರಳಿ ಮಗನ ಆರೋಗ್ಯಕ್ಕಾಗಿ ಪೂಜೆ ನಡೆಸಿ ಬಂದಿದ್ದರೂ ಎನ್ನಲಾಗಿದೆ.
ಹತ್ಯೆ ಆರೋಪಿಯ ಸಹೋದರ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಆತನ ತಂದೆಯೂ ಕಳೆದ ಹಲವು ವರ್ಷಗಳ ಹಿಂದೆ ಮೃತ ಪಟ್ಟಿದ್ದರು ಎನ್ನಲಾಗುತ್ತಿದೆ. ಪ್ರಕರಣದ ಮಾಹಿತಿಯರಿತ ಪೋಲಿಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

























Discussion about this post