ಟೆಕ್ಸಾಸ್: ಮಾಸ್ಕ್ ಧರಿಸುವುದನ್ನು ವಿರೋಧಿಸುತ್ತಾ, ತಾನೂ ಮಾಸ್ಕ್ ಹಾಕದೆ ಓಡಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಟೆಕ್ಸಾಸ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕ್ಯಾಲೆಬ್ ವಾಲೆಸ್ ಎಂಬ ವ್ಯಕ್ತಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಸಹ, ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್ ಅಂದಿದ್ದರು. ಇದರಿಂದಾಗಿ ಸೋಂಕು ತಗಲಿದ ಅವರು ಒಂದು ತಿಂಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಕ್ಯಾಲೆಬ್ ಪತ್ನಿ ಜೆಸ್ಸಿ ಗೊ ಆತನ ಸಾವಿಗೆ ಮರುಗಿದ್ದು, ತನ್ನ ಪತಿ ಶಾಂತಿಯಿಂದ ತೆರಳಿದ್ದು, ಎಂದಿಗೂ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಮೀ ಪೇಜ್ ನಲ್ಲಿ ಪೊಸ್ಟ್ ಹಾಕಿಕೊಂಡಿದ್ದಾರೆ.
ಕ್ಯಾಲೆಬ್ ದಂಪತಿಗಳಿಗೆ ಮೂರು ಮಕ್ಕಳಿದ್ದು, ನಾಲ್ಕನೆ ಮಗುವಿಗೆ ಪತ್ನಿ ಜೆಸ್ಸಿ ಗರ್ಭಧರಿಸಿದ್ದರು. ಕೊರೋನ ವಿರುದ್ಧ ಸೆಣಸಲು, ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸುವವರಿಗೆ ಇದೊಳ್ಳೆ ಪಾಠವೂ ಆಗಬಹುದು.
Discussion about this post