ನೈಪಿಡಾವ್: ಮ್ಯಾನ್ಮಾರ್ನ ಹೋರಾಟಗಾತರ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿಗೆ ಸ್ಥಳೀಯ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೇನೆ ವಿರುದ್ಧ ಜನರನ್ನು ಎತ್ತುಕಟ್ಟಿದ ಮತ್ತು ಕೋವಿಡ್-19 ನಿಯಮ ಉಲ್ಲಂಘಿಸಿದ ಅಪರಾಧಕ್ಕಾಗಿ ಈ ಸಜೆ ವಿಧಿಸಲಾಗಿದೆ. ಮಾಜಿ ಅಧ್ಯಕ್ಷ ವಿನ್ ಮೈಂಟ್ಗೂ ನಾಲ್ಕು ವರ್ಷದ ಶಿಕ್ಷೆ ಆಗಿದೆ.
ಸೆಕ್ಷನ್ 505(ಬಿ) ಮತ್ತು ನೈಸರ್ಗಿಕ ವಿಕೋಪ ಕಾನೂನಿನ ಅಡಿಯಲ್ಲಿ ತಲಾ ಎರಡು ವರ್ಷಗಳ ಶಿಕ್ಷೆಯನ್ನು ಸೂಕಿ ಮತ್ತು ಮೈಂಟ್ಗೆ ನ್ಯಾಯಾಲಯ ವಿಧಿಸಿದೆ. ಸದ್ಯ ಗೃಹ ಬಂಧನದಲ್ಲಿರುವ ಅವರನ್ನು ಜೈಲಿಗೆ ಇನ್ನು ಕಳುಹಿಸಿಲ್ಲ ಎಂದು ಸೇನಾ ಆಡಳಿತಗಾರ ಜುಂಟಾ ವಕ್ತಾರ ಜಾವ್ ಮಿನ್ ತುನ್ ಹೇಳಿದ್ದಾರೆ. ನ್ಯಾಯಾಲಯದ ವಿಚಾರಣೆ ವೇಳೆ ಪರ್ತಕರ್ತರಿಗೆ ಅವಕಾಶ ನಿರಾಕರಿಸಲಾಗಿತ್ತು.
ಕಳೆದ ಫೆಬ್ರವರಿ 1ರಂದು ಕ್ಷಿಪ್ರ ಕ್ರಾಂತಿ ನಡೆಸಿದ ಸೇನೆ, ಚುನಾಯಿತ ಸರ್ಕಾರವನ್ನು ಪದ್ಯುತಗೊಳಿಸಿ, ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ಪಕ್ಷದ ಅಧ್ಯಕ್ಷೆ, ಸಂಸದೆಯಾಗಿದ್ದ 70 ವರ್ಷದ ಆಂಗ್ ಸಾನ್ ಸೂಕಿಯನ್ನು ಅವರ ಮನೆಯಲ್ಲೇ ಬಂಧಿಸಿತು. 2020ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ಎಲ್ಡಿ ಪಕ್ಷವು ಅಭೂತಪೂರ್ವ ಜಯಸಾಧಿಸಿತು. ಇದರಿಂದ ಸೇನೆಯ ಹಿಡಿತ ಕಡಿಮೆ ಆಗುತ್ತದೆ ಎಂದು ಫೆಬ್ರವರಿಯಲ್ಲಿ ಕ್ರಾಂತಿ ನಡೆಸಿ ಜುಂಟಾ ಮುಖ್ಯಸ್ಥರಾಗಿರುವ ಸೇನೆ, ಚುನಾವಣೆಯ ಅಕ್ರಮದ ಆರೋಪ ಹೊರಿಸಿ ಅಧಿಕಾರವನ್ನು ವಶ ಮಾಡಿಕೊಂಡಿತು. ಸೂಕಿ ಮತ್ತು ಅಧ್ಯಕ್ಷ ಮೈಂಟ್ ಮತ್ತು ಸಚಿವರು, ಅನೇಕ ಸಂಸದರ ವಿರುದ್ಧ ಪ್ರಕರಣದ ದಾಖಲಿಸಿತು.
ಸೇನಾ ಕ್ರಾಂತಿಯನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ 1,300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 10 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರು ಭಾರತದ ಮಣಿಪುರಕ್ಕೆ ವಲಸೆ ಬಂದು ಆಶ್ರಯ ಪಡೆದಿದ್ದಾರೆ.
Myanmar’s Aung San Suu Kyi jailed for four years
ಇದನ್ನು ಓದಿ: Quarantine: ಇನ್ಮುಂದೆ ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ
ಇದನ್ನೂ ಓದಿ: ಆಲೂಗಡ್ಡೆ ತಳಿಗೆ ಏಕಸ್ವಾಮ್ಯ ಪಡೆದಿದ್ದ ಪೆಪ್ಸಿ ಕಂಪನಿ ವಿರುದ್ಧದ ಮೊಕದ್ದಮೆ ಗೆದ್ದ ರೈತ ಮಹಿಳೆ
Discussion about this post