ಚಿಕ್ಕಮಗಳೂರು: ವಿಶೇಷ ಪೊಲೀಸ್ ಅರಣ್ಯ ಸಂಚಾರಿದಳದ ಪೊಲೀಸರು ಮರಗಳ್ಳರ ಅಡ್ಡಾದ ಮೇಲೆ ರೈಡ್ ಮಾಡಿ, ಅಪಾರ ಬೆಲೆ ಬಾಳುವ ರಕ್ತ ಚಂದನ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಮಾರು ೪೨೦ ಕೆ.ಜಿ ತೂಕದ ರಕ್ತ ಚಂದನ ಮರವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಾಗದ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ, ೨,೬೦,೦೦೦/- ರೂಪಾಯಿ ಮೌಲ್ಯ ಬೆಲೆಬಾಳುತ್ತದೆ ಎಂದು ಮೂಲಗಳು ತಿಳಿಸಿವೆ.
ರಕ್ತ ಚಂದನ ಮರದ ತುಂಡುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಗಾ ಗ್ರಾಮದ ಓರ್ವರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಅಬ್ದುಲ್, ಹಮೀದ್ ಎಂದು ಗುರುತಿಸಿದ್ದು, ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಸದರಿ ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ಶೋಭಾ, ಸಿಬ್ಬಂದಿಗಳಾದ ದೇವರಾಜ್, ದಿವಾಕರ,ಕೃಷ್ಣರಾಜ್ ಅರಸ್, ದಿನೇಶ್, ದಿಲೀಪ್, ಹಾಲೇಶ್, ಕೃಷ್ಣ ಶೆಟ್ಟಿ ಭಾಗವಹಿಸಿದ್ದರು.

























Discussion about this post