ಚಿಕ್ಕಮಗಳೂರು: ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿಸಾನ್ ಖೇತ್ ಮಜ್ದೂರ್ ರಾಜ್ಯ ಸಂಚಾಲಕ ಸಿ. ಎನ್ .ಅಕ್ಮಲ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಂಬೇಡ್ಕರ್ ರಸ್ತೆಯ ಜ್ಯೋತಿ ಸರ್ಕಲ್ ಬಳಿ ರಸ್ತೆ ಮಧ್ಯೆ ಗುಂಡಿಗಳನ್ನು ಮುಚ್ಚಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು
ಚಿಕ್ಕಮಗಳೂರು ಅಮೃತ ಯೋಜನೆ ಮತ್ತು ಯುಜಿಡಿ ಕಾಮಗಾರಿ ಪೂರ್ಣವಾದರೂ ರಸ್ತೆಗಳು ಮಾತ್ರ ಗೊಚ್ಚೆ ಗುಂಡಿಯಾಗಿಯೇ ಉಳಿದುಕೊಂಡಿದೆ.ಇದರಿಂದ ೨ ವರ್ಷಗಳಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದೆ . ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಬಹುತೇಕ ಎಲ್ಲಾ ವಾರ್ಡ್ ಗಳಲ್ಲೂ ಇದೇ ಸಮಸ್ಯೆ ಎಂದು ಅಕ್ಮಲ್ ಹರಿ ಹಾಯ್ದರು.
ಸ್ಥಳೀಯ ಶಾಸಕರು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪರವರು ಹಲವಾರು ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡಿ ಹೋಗಿದ್ದಾರೆ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗಿದೆ ಎಂದು ಆರೋಪಿಸಿದರು
ಹಲವು ಕಾಮಗಾರಿಗಳು ಕಳಪೆಯಾಗಿದ್ದು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ರೆಹಮಾನ್. ಮೊಸೀನ್ .ರಾಮಚಂದ್ರ .ಆನಂದ್ . ಸಾದಿಕ್ .ರಿಜ್ವಾನ್ ಉಪಸ್ಥಿತರಿದ್ದರು .

























Discussion about this post