ನವದೆಹಲಿ: ಉತ್ತರಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರವನ್ನು ಪ್ರತಿಭಟಿಸಿ ಅ.18 ರಂದು ‘ರೈಲ್ ರೋಕೋ’ ಚಳುವಳಿ ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್, ಅ.12 ರಂದು ಯುಪಿಯ ಎಲ್ಲಾ ಜಿಲ್ಲೆಗಳಲ್ಲಿ ‘ಕಲಶ್ ಯಾತ್ರಾ’ ನಡೆಸಲಾಗುವುದು; ಅ.18 ರಂದು ‘ರೈಲ್ ರೋಕೋ’ ಚಳುವಳಿ ನಡೆಸಲಾಗುವುದು ಮತ್ತು ಅ.26 ರಂದು ಲಖನೌನಲ್ಲಿ ‘ಮಹಾಪಂಚಾಯತ್’ ನಡೆಸಲಾಗುವುದು ಎಂದರು. ಜೊತೆಗೆ, ಅ.15 ಕ್ಕೆ ದಸರಾ ಸಂದರ್ಭಕ್ಕೆ ರೈತರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಪ್ರತಿಕೃತಿ ದಹನ ಮಾಡಲಿದ್ದಾರೆ ಎಂದರು.
ಪ್ರತಿಭಟನಾಕಾರ ರೈತರೂ ಮೂವರು ಬಿಜೆಪಿ ಕಾರ್ಯಕರ್ತರನ್ನು ಸಾಯಿಸಿದ್ದಾರಲ್ಲಾ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ತಿಕಾಯತ್, “ಅದು ಆ್ಯಕ್ಷನ್ಗೆ ರಿಯಾಕ್ಷನ್ ಆಗಿತ್ತು. ಅದಕ್ಕಾಗಿ ಯಾವುದೇ ಯೋಜನೆ ನಡೆದಿರಲಿಲ್ಲ. ಆದ್ದರಿಂದ ಅದು ಕೊಲೆ ಆಗುವುದಿಲ್ಲ” ಎಂದಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

























Discussion about this post