ಚಿಕ್ಕಮಗಳೂರು: ಕಳೆದ ಸೆ. ೧೬ರಂದು ಮೂರಾರ್ಜಿ ಶಾಲೆಯಲ್ಲಿ ಮಂಗನ ಜೊತೆಗೆ ಆಟೋ ಚಾಲಕನೊಬ್ಬ ಕಿರಿಕ್ ಮಾಡಿಕೊಂಡಿದ್ದ ವೇಳೆ ರೊಚ್ಚಿಗೆದ್ದಿದ್ದ ಮಂಗ ಮತ್ತೊಮ್ಮೆ ಕೊಟ್ಟಿಗೆ ಹಾರ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಬಹುಶಃ ಹಿಂದಿನ ಸೇಡು ತೀರಿಸಿಕೊಳ್ಳಲು ಮಂಗ ವಾಪಾಸ್ ಬಂದಿದೆ ಎಂದು ಕೆಲವರು ಭಯದಿಂದ
ಕಂಗಾಲಾಗಿದ್ದಾರೆ. ಸುಮಾರು ೫೦ ಜನರು ಮಂಗನನ್ನು ಅರವಳಿಕೆ ಮದ್ದು ನೀಡುವ ಮೂಲಕ ಕಾರ್ಯಚರಣೆ ನಡೆಸಿ ಸೆರೆಹಿಡಿದಿದ್ದರು. ಶಾಲೆಯಲ್ಲಿ ಮಂಗನೊಂದಿಗೆ ಆಟೋ ಚಾಲಕ ಕಿರಿಕ್ ಮಾಡಿಕೊಂಡಿದ್ದು ಮಂಗ ರೊಚ್ಚಿಗೆದ್ದಿತ್ತು.
೨೦ ಗಂಟೆಗಳ ಕಾಲ ಆಟ ಆಡಿಸಿದ್ದ ಮಂಗ ಕೊನೆಗೂ ಶರಣಾಗಿತ್ತು. ಅದನ್ನು ೨೨ ಕಿ.ಮೀ ದೂರದ ಚಾರ್ಮಾಡಿ ಘಾಟ್ ನಲ್ಲಿ ಬಿಟ್ಟು ಬಂದಿದ್ದರು. ಆದರೆ ಅದೇ ಮಂಗ ಇಂದು ಲಾರಿ ಮೂಲಕ ವಾಪಾಸ್ಸು ಅದೇ ಪ್ರದೇಶಕ್ಕೆ ಬಂದಿದ್ದು, ಆ ಆಟೋ ಚಾಲಕನಿಗೆ ಯಾವ ಗ್ರಹಚಾರ ಕಾದಿದೆಯೋ ಎಂಬ ಮಾತುಗಳು ಕೇಳಿಬಂದಿದೆ.

























Discussion about this post