ಚಿಕ್ಕಮಗಳೂರು : ಕನಿಷ್ಟ ವೇತನ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಲ್ಲಿನ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ವಿವಿಧ ಸೇವೆಗಳಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರಿಗೆ ತಕ್ಷಣ ಕೋವಿಡ್ ಲಸಿಕೆ, ಸುರಕ್ಷಾ ಸಾಧನ ಕುಡುಗೆ ೫೦ ಲಕ್ಷ ರೂ ವಿಮೆ ಮಾಡಿಸುವಂತೆ ಆಗ್ರಹಿಸಿದರು.
ಕಾರ್ಮಿಕರೆಂದು ಪರಿಗಣಿಸಿ ೨೧ ಸಾವಿರ ರೂ ವೇತನ ಸೌಲಭ್ಯ ಕಲ್ಪಿಸಿ, ತಿಂಗಳಿಗೆ ೧೦ ಸಾವಿರ ಪಿಂಚಣಿ ಸೌಲಭ್ಯ, ಕಾರ್ಮಿಕ ಕಾಯ್ದೆಯಡಿ ತರುವ ಇತರೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು ಸಂಘಟನೆಯ ನೇತೃತ್ವವನ್ನು ನಾಯಕರಾದ ಮಂಗಲ ವಿಜಯ್‌ಕುಮಾರ್ ಸೇರಿದಂತೆ ಮತ್ತಿತರರು ವಹಿಸಿದ್ದರು.

























Discussion about this post