ಚಿಕ್ಕಮಗಳೂರು: ಒಂದು ರಾಷ್ಟ್ರ ಸದೃಢವಾಗಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸದೃಢರಾಗಬೇಕು ಹಾಗೂ ಕ್ರಿಯಾಶೀಲ ಪ್ರಜೆಯಾಗಲು ಬೇಕಾಗುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ನುಡಿದರು.
ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಜಿಲ್ಲೆಯ ರೋವರ್ಸ್, ಮತ್ತು ರೇಂಜರ್ಸ್ ಪರೀಕ್ಷಾ ನಿಪುನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನರ ಗಮನ ರಾಷ್ಟ್ರ ಕಟ್ಟುವ ಚಟುವಟಿಕೆಗಳೆಡಗೆ ಕೇಂದ್ರೀಕೃತವಾಗಬೇಕು ಇಲ್ಲದಿದ್ದರೆ ಮನಸ್ಸು ಸಮಾಜ ವಿರೋದಿ ದಿಕ್ಕಿನಲ್ಲಿ ಸೆಳೆಯಲು ಬಹಳ? ಶಕ್ತಿಗಳು ಹೊಂಚು ಹಾಕುತ್ತಿರುತ್ತವೆ ರೋವರ್ಸ್ ಮತ್ತು ರೇಂಜರ್ಸ, ಚಳುವಳಿಯಲ್ಲಿ ದೊರೆಯುವ ಅವಕಾಶಗಳಾದ ಚಾರಣ, ಪ್ರಕೃತಿ ಅಧ್ಯಯನ, ಸಮಾಜಸೇವೆ, ವ್ಯಕ್ತಿವಿಕಸನ, ಸಹಬಾಳ್ವೆ, ವಿಶ್ವಭ್ರಾತೃತ್ವ, ಈ ರೀತಿಯ ಕಾರ್ಯಗಳಲ್ಲಿ, ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಾಮಾಜಿಕ ಬದ್ಧತೆ ಮತ್ತು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕೆಂದರು.
ಯಾವುದೇ ಒಂದು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮೈಗೂಡಿಸಿಕೊಳ್ಳಲು ಸಕ್ರಿಯ ಭಾಗವಹಿಸುವಿಕೆ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ನವೀನ್ಕುಮಾರ್, ಸ್ವಾಗತಿಸಿದರು, ಶಿಬಿರದ ನಾಯಕ ಯೋಗೀಶ್ ಪ್ರಾಸ್ತಾವಿಕ ನುಡಿ ನುಡಿದರು ಮತ್ತೋರ್ವ ನಾಯಕಿ ಸುಹಾನಸುಲ್ತಾನ ವಂದಿಸಿದರು.
ಶಿಬಿರದಲ್ಲಿ ಅನುಶ್ರೀ ,ಸಚಿನ್, ಮತು ಕಿರಣ್ಕುಮಾರ್ ಸಹನಾಯಕರಾಗಿ ಕಾರ್ಯನಿರ್ವಹಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು ೧೦೦ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

























Discussion about this post