ನವದೆಹಲಿ: ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಅತೀವ ಕಾಳಜಿ ವಹಿಸುತ್ತಾರೆ. ಆಟ ಆಡುವಾಗ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆಂದು ಆತಂಕಗೊಳ್ಳುತ್ತಾರೆ, ಚಿಂತೆಗೀಡಾಗುತ್ತಾರೆ. ಇನ್ನು ವ್ಯಾಯಾಮ ಮಾಡುವಾಗ ದಿಢೀರನೆ ಎದೆ ನೋವು ಕಾಣಿಸಿಕೊಂಡರೆ ಪಾಲಕರ ಸಂಕಟ ಹೇಳತೀರದು. ಇಂಥ ಸಮಯದಲ್ಲಿ ಆತಂಕಗೊಳ್ಳದೆ. ಈ ಕ್ರಮವನ್ನು ಅನುಸರಿಸಿದರೆ ಮಕ್ಕಳ ಆರೋಗ್ಯ ಸರಿಹೋಗುತ್ತದೆ. ನಂತರ ಸಮೀಪದ ವೈದ್ಯರಲ್ಲಿ ಕರೆದೊಯ್ಯಬೇಕು ಎಂದು ಹೃದಯ ರಕ್ತನಾಳ, ಎದೆಗೂಡಿನ ಶಸ್ತ್ರ ಚಿಕಿತ್ಸಕ ಡಾ. ರಮಾಕಾಂತ ಪಾಂಡ ಸಲಹೆ ನೀಡುತ್ತಾರೆ.
“ಮಕ್ಕಳಲ್ಲಿ ಸಾಮಾನ್ಯವಾಗಿ ಎದೆ ನೋವು ಚರ್ಮ, ಮೂಳೆ, ಅನ್ನನಾಳ, ಸ್ನಾಯು ಸೆಳೆತದಿಂದ ಉಂಟಾಗುತ್ತದೆ. ನರ ಮತ್ತು ಶ್ವಾಸಕೋಶದಿಂದ ಎದೆ ನೋವು ಕಾಣಿಸಿಕೊಳ್ಳುವುದು ಬಹಳ ವಿರಳ. ವ್ಯಾಯಾಮ ಮಾಡುವಾಗ ತೀವ್ರವಾದ ಎದೆ ನೋವು ಬಿಟ್ಟು ಬಿಟ್ಟು ಕಾಣಿಸಿಕೊಳ್ಳುತ್ತದೆ ಅಥವಾ ಒಂದು ತಾಸಿನ ಬಳಿಕವೂ ಬರಬಹುದು. ಇದನ್ನು ಉದಾಸೀನ ಮಾಡಬಾರದು’ ಎಂದು ಮುಂಬೈನಲ್ಲಿರುವ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರೂ ಆಗಿರುವ ಪಾಂಡ ಹೇಳುತ್ತಾರೆ.
ಜೋರಾಗಿ ಆಳುವುದು, ಕಿರುಚುವುದರಿಂದಲೂ ಸಣ್ಣ ಮಕ್ಕಳಲ್ಲಿ ಎದೆ ನೋವಿಗೆ ಕಾರಣ ಆಗಬಹುದು. ಇದರಿಂದ ಹೃದಯದ ಬಡಿತ. ರಕ್ತದ ಪರಿಚಲನೆ ಹೆಚ್ಚುತ್ತದೆ. ಈ ರೀತಿಯ ಮಕ್ಕಳಲ್ಲಿ ಜನ್ಮತಃ ಹೃದಯ ದೋಷವಿದ್ದರೆ ಅಪಾಯ ಸಂಭವ ಹೆಚ್ಚು. ಆದರೆ, ಇದನ್ನು ಬೇಗನೆ ಗುರುತಿಸದಿದ್ದರೆ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ತಪಾಸಣೆಯಲ್ಲಿ ಎದೆ ನೋವು ಇರುವುದು ಗೊತ್ತಾದರೆ ಅದನ್ನು ಗುಣಪಡಿಸಬಹುದು ಇಲ್ಲವೆ, ನಿಯಂತ್ರಿಸಬಹುದು. ಔಷಧ ಮತ್ತು ಜೀವನ ಶೈಲಿಯ ಸುಧಾರಣೆಯಿಂದ ಇದು ಸಾಧ್ಯವಾಗುತ್ತದೆ. ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆಯೂ ಸೂಕ್ತ ಪರಿಹಾರ ಆಗುತ್ತದೆ ಎಂಬುದು ಪಾಂಡ ಅಭಿಪ್ರಾಯ.
ಹುಟ್ಟಿನಿಂದಲೇ ಕಾಣಿಸಿಕೊಳ್ಳುವ ಎದೆ ನೋವು ತೀವ್ರವಾಗಿದ್ದರೆ ಅಪಾಯದ ಸಂಭನೀಯತೆ ಹೆಚ್ಚು. ಅಪಧಮನಿ ಸಾಮಾನ್ಯವಾಗಿರುವುದರ ಬದಲು ಮೇಲಿನ ಕೋನದಲ್ಲಿ ಇದ್ದರೆ ವ್ಯಾಯಾಮ ಮಾಡಿದಾಗ ಆಯಾಸ ಹೆಚ್ಚಾಗಿ ಎದೆ ನೋವು ಕಾಣಿಸಿಕೊಳ್ಳುತ್ತದೆ. ಅಪಧಮನಿಯು ನಿದಿರ್ಷ್ಟ ಸ್ಥಳ ಬಿಟ್ಟು, ತಪ್ಪಾದ ಸ್ಥಳದಲ್ಲಿ ಸ್ಥಿತವಾಗಿದ್ದರೆ ವ್ಯಾಯಾಮ ಮಾಡುವಾಗ ಅಥವಾ ಜೋರಾಗಿ ಅತ್ತರೆ ಎದೆ ಸಂಕುಚಿತಗೊಂಡು ನೋವು ಕಾಣಿಸುತ್ತದೆ. ಮಕ್ಕಳಲ್ಲಿ ಎದೆ ನೋವು ಪದೇ ಪದೆ ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೆ ಕೂಡಲೇ ಹೃದ್ರೋಗ ತಜ್ಞರಲ್ಲಿ ತೋರಿಸುವುದು ಒಳಿತು. ಅವರು ಸಿಟಿ ಸ್ಕ್ಯಾನ್ಗೆ ಸಲಹೆ ನೀಡಬಹುದು. ಅನುಭವಸ್ಥ ವೈದ್ಯನಾದರೆ ಇದನ್ನು ಇಸಿಜಿ ಪರೀಕ್ಷೆಯಲ್ಲಿ ಪತ್ತೆ ಮಾಡುತ್ತಾನೆ ಎಂದು ಪಾಂಡ ಅಭಿಪ್ರಾಯಪಡುತ್ತಾರೆ.
Child Experiences Chest Pain During Exercising
ಇದನ್ನು ಓದಿ: Health: ವ್ಯಾಯಾಮಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರುವುದನ್ನು ನಿರೂಪಿಸಿದ ಅಧ್ಯಯನ
ಇದನ್ನೂ ಓದಿ: Ashwagandha: ಹಾಲಿನೊಂದಿಗೆ ಅಶ್ವಗಂಧ – ಆರೋಗ್ಯಕರ ಲಾಭಗಳು
Discussion about this post