ಶೃಂಗೇರಿ: ಪ್ರಾಥಮಿಕ, ಪ್ರೌಢ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ಕುಟುಂಬ ಸಮೇತ ಆಗಮಿಸಿ ಶ್ರೀ ಶಾರದಾಂಬೆ, ತೋರಣಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗುರುನಿವಾಸದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರ ಆರ್ಶೀವಾದ ಪಡೆದರು.
ಮಾದ್ಯಮದ ಜೊತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ, ಒಂದರಿಂದ ಐದನೇ ತರಗತಿ ಪ್ರಾರಂಭಿಸುವ ಕುರಿತು ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತಿದ್ದು ತಜ್ಞರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ೬ ರಿಂದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಕ್ಲಾಸ್ ಪ್ರಾರಂಭವಾದರೂ ಹಲವು ಕಡೆ ಇಂಟರ್ನೆಟ್ ಸಮಸ್ಯೆಗಳು ಇವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಹಲವು ಕಡೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ರಾಜ್ಯದ ೧೩ ಜಿಲ್ಲೆಗಳಲ್ಲಿ ಆನ್ಲೈನ್ ತರಗತಿಗೆ ಶೇ.೯೫ ವಿದ್ಯಾರ್ಥಿಗಳು ಹಾಜರಾಗಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಮಕ್ಕಳು ಶಾಲಾವಾತಾವರಣದಲ್ಲಿ ಬೆಳೆದರೆ ಮಾತ್ರ ಅವರು ಮತ್ತಷ್ಟು ಕ್ರಿಯಾಶೀಲರಾಗಲು ಸಾಧ್ಯ ಎಂದರು.

























Discussion about this post