ಚಿಕ್ಕಮಗಳೂರು: ನವರಾತ್ರಿ ಹಬ್ಬದ ಆರನೇ ದಿನ ಪ್ರಯುಕ್ತ ಶ್ರೀ ಮಾತ ಮಹಿಳಾ ಮಂಡಳಿ ವತಿಯಿಂದ ಶಾರದಾ ಪೂಜೆಯನ್ನು ನಗರದ ಬಸವನಹಳ್ಳಿಯಲ್ಲಿರುವ ಮಂಡಳಿ ಸದಸ್ಯೆ ಜಯಸುಧಾ ಹೇಮರಾಜ್ ಅವರ ಮನೆಯಲ್ಲಿ ನಡೆಸಲಾಯಿತು.
ನಂತರ ಮಾತನಾಡಿದ ಮಂಡಳಿ ಅಧ್ಯಕ್ಷೆ ರಮರಾಜ್ ನವರಾತ್ರಿ ಪ್ರಯುಕ್ತ ಲಲತಾ ದೇವಿಯ ಆರಾಧನೆಯನ್ನು ಮಾಡುತ್ತಾ ಬಂದಿದ್ದು ಇಂದು ಸಹ ಶಾರದಾಪೂಜೆಯನ್ನು ಸದಸ್ಯೆ ಮನೆಯಲ್ಲಿ ಎಲ್ಲರ ಮಹಿಳೆಯರ ಸಮ್ಮುಖದಲ್ಲಿ ನಡೆಸುತ್ತಿರುವುದು ತುಂಬ ಸಂತೋಷ ನೀಡಿದೆ ಎಂದು ಹೇಳಿದರು.
ಲೋಕ ಕಲ್ಯಾಣಾರ್ಥವಾಗಿ ಮಂಡಳಿಯ ಎಲ್ಲಾ ಮಹಿಳೆಯರು ಸೇರಿ ಲಲಿತಾ ಸಹಸ್ರನಾಮ, ಅಶೋತ್ತರ ಪೂಜೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜೊತೆಗೆ ನವರಾತ್ರಿ ಒಂಬತ್ತು ದಿನಗಳ ಪೂಜೆಯನ್ನು ಪ್ರತಿ ಸದಸ್ಯರ ಮನೆಯಲ್ಲಿ ಒಂದೊಂದು ದಿನ ನಡೆಸಲಾಗುತ್ತಿದೆ ಎಂದರು.
ಮಂಡಳಿ ಉಪಾಧ್ಯಕ್ಷೆ ಅನ್ನಪೂರ್ಣ ಗೋಪಾಲಕೃಷ್ಣ ಮಾತನಾಡಿ ಕಳೆದ ಗುರುವಾರದಿಂದ ಪ್ರಾರಂಭವಾದ ನವರಾತ್ರಿಯ ಪೂಜೆಯು ಇಂದಿನ ದಿನದವರೆಗೂ ಶ್ರದ್ದಾಭಕ್ತಿಯಿಂದ ಆಚರಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಖಜಾಂಚಿ ಸರೋಜಮ್ಮ, ಸದಸ್ಯರುಗಳಾದ ರಶ್ಮಿ, ಭವ್ಯ, ಮೀನಾ, ಲತಾ, ಶೈಲಾ, ರೇಷ್ಮಾ, ಪ್ರಭಾ, ಸುಧಾ, ಸುಪ್ರೀತಾ, ಜ್ಯೋತಿ, ವೀಣಾ, ಮಮತ, ಆಶಾ, ಶಶಿಕಲಾ ಅಶೋಕ್ ಮತ್ತಿತರರು ಹಾಜರಿದ್ದರು.

























Discussion about this post