ವಾಷಿಂಗ್ಟನ್: ಅಫ್ಘಾಸ್ತಾನದ ತಾಲಿಬಾನ್ ಆಡಳಿತಕ್ಕೆ ಒಳಪಟ್ಟ ಮೇಲೆ ಅಲ್ಲಿ 6,400 ಪತ್ರಕರ್ತರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಮೆರಿಕ ಮತ್ತು ನ್ಯಾಟೊ ಪಡೆಗಳು ವಾಪಸ್ಸಾಗಿ ದೇಶವು ತಾಲಿಬಾನ್ ಆಡಳಿತ ಜಾರಿಯಾದ ಮೇಲೆ 231 ಮಾಧ್ಯಮ ಸಂಸ್ಥೆಗಳು ಮುಚ್ಚಿವೆ. ಅಂದರೆ ಪ್ರತಿ ಹತ್ತರಲ್ಲಿ ನಾಲ್ಕು ಸಂಸ್ಥೆಗಳು ಬಂದ್ ಆಗಿವೆ ಎಂದು ರಿಪೋಟರ್ಸ್ ವಿತೌಟ್ ಬಾರ್ಡರ್ಸ್ (ಆರ್ಎಸ್ಎಫ್) ಮತ್ತು ಆಫ್ಘನ್ ಇಂಡಿಪೆಂಡೆಂಟ್ ಜರ್ನಲಿಸ್ಟ್ ಅಸೋಸಿಯೇಷನ್ (ಎಐಜೆಎ) ನಡೆಸಿದ ಸಮೀಕ್ಷೆ ತಿಳಿಸಿದೆ.
ಮಾಧ್ಯಮ ಸಂಸ್ಥೆಗಳು ಕದಹಾಕಿರುವುದರಿಂದ ಉದ್ಯೋಗ ಕಳೆದುಕೊಂಡವರಲ್ಲಿ ಶೇ. 80ರಷ್ಟು ಮಹಿಳೆಯರು ಎನ್ನುವುದು ಗಮನಾರ್ಹ ಎಂದು ಸಮೀಕ್ಷೆ ಹೇಳಿದೆ.
ಕಳೆದ ಬೇಸಿಗೆಯಲ್ಲಿ 543 ಮಾಧ್ಯಮ ಸಂಸ್ಥೆಗಳು ಸಕ್ರಿಯವಾಗಿದ್ದವು. ನವೆಂಬರ್ ಅಂತ್ಯದ ಹೊತ್ತಿಗೆ 312 ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಂದರೆ ಶೇ. 43ರಷ್ಟು ಸಂಸ್ಥೆಗಳು ಬಾಗಿಲು ಮುಚ್ಚಿವೆ ಎಂದು ಆರ್ಎಸ್ಎಫ್ ಮತ್ತು ಎಐಜೆಐ ತಿಳಿಸಿವೆ.
ನಾಲ್ಕು ತಿಂಗಳ ಹಿಂದೆ ಆಫ್ಘನ್‌ನ ಹಲವು ಪ್ರಾಂತ್ಯದಲ್ಲಿ ಕನಿಷ್ಠ ಹತ್ತಾದರೂ ಮೀಡಿಯಾ ಸಂಸ್ಥೆಗಳು ಇದ್ದವು. ಆದರೀಗ ಗುಡ್ಡಗಾಡು ಪ್ರಾಂತ್ಯದಲ್ಲಿ ಒಂದೂ ಮಾಧ್ಯಮ ಸಂಸ್ಥೆಗಳು ಇಲ್ಲ. ದೇಶದ ಮೂರನೇ ಅತಿ ದೊಡ್ಡ ನಗರವಾದ ಹೆರಾತ್‌ನಲ್ಲಿ 51 ಮಾಧ್ಯಮ ಸಂಸ್ಥೆಗಳಿದ್ದವು, ಈಗ ಇವುಗಳ ಸಂಖ್ಯೆ 18ಕ್ಕೆ ಇಳಿದಿದೆ. ಸೆಂಟ್ರಲ್ ಕಾಬೂಲ್ ಪ್ರದೇಶದಲ್ಲಿ 148 ಮೀಡಿಯಾ ಹೌಸ್‌ಗಳಿದ್ದವು, ಈಗ ಇದರ ಸಂಖ್ಯೆ 72ಕ್ಕೆ ಇಳಿದಿದೆ. ಅಂದರೆ ಶೇ. 51ರಷ್ಟು ಮಾಧ್ಯಮ ಸಂಸ್ಥೆಗಳು ಮುಚ್ಚಿವೆ ಎಂದು ಸಮೀಕ್ಷೆಯ ಅಂಕಿಅಂಶ ವಿವರಿಸಿದೆ.
Over 6,400 journalists in Afghanistan lost jobs since Taliban takeover
ಇದನ್ನು ಓದಿ: ಅಫ್ಘಾನಿಸ್ತಾನ ಕಾರ್ಯತಂತ್ರ ವೈಫಲ್ಯ: ಒಪ್ಪಿದ ಅಮೆರಿಕ ಸೇನೆ
ಇದನ್ನೂ ಓದಿ: ಮದರಸಾಗಳು ತಾಲಿಬಾನ್‌ಗಳನ್ನು ಸೃಷ್ಟಿಸುತ್ತಿಲ್ಲ
Discussion about this post